ಕರ್ನಾಟಕ ಚುನಾವಣೆಗೆ ಗುಜರಾತ್ ಮಾಡೆಲ್ ಅನುಸರಿಸುತ್ತಾ ಬಿಜೆಪಿ? ಆತಂಕದಲ್ಲಿ ಹಲವರು!

ರೌಡಿ ರಾಜಕೀಯಕ್ಕೆ ಬಿಜೆಪಿ  ತಿರುಗೇಟು, ಸಿದ್ದು ಸೇರಿ ಕಾಂಗ್ರೆಸ್ ನಾಯಕರ ಭೇಟಿ ಮಾಡಿದ ಹೆಚ್ ವಿಶ್ವನಾಥ್, ಜಾರಕಿಹೊಳಿ ವಿರುದ್ಧ ಗುಡುಗಿದ ಯತ್ನಾಳ್, ಚಾಮಾರಾಜಪೇಟೆಯಿಂದ ಸ್ಪರ್ಧಿಸಲು ಮನಸ್ಸು, ಸಿದ್ದರಾಮಯ್ಯಗೆ ಕಸಿವಿಸಿ ಸೇರಿದಂತೆ ಇಂದಿನ ಇಡೀ ದಿನದ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

Share this Video
  • FB
  • Linkdin
  • Whatsapp

ಗುಜರಾತ್ ಚುನಾವಣೆ ಫಲಿತಾಂಶಕ್ಕೆ ಕರ್ನಾಟಕ ರಾಜ್ಯ ಬಿಜೆಪಿ ಕಾಯುತ್ತಿದೆ. ಗುಜರಾತ್ ಚುನಾವಣಾ ಮಾಡೆಲ್ ರೀತಿಯಲ್ಲೇ ರಾಜ್ಯದಲ್ಲೂ ಚುನಾವಣೆ ಎದುರಿಸಲು ಬಿಜೆಪಿ ಹೈಕಮಾಂಡ್ ಮನಸ್ಸು ಮಾಡಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದು ಹಲವರ ಆತಂಕಕ್ಕೆ ಕಾರಣವಾಗಿದೆ. ಗುಜರಾತ್‌ನಲ್ಲಿ ಹಲವು ಹಾಲಿ ಶಾಸಕರು, ಸಚಿವರಿಗೆ ಟಿಕೆಟ್ ನಿರಾಕರಿಸಿ ಯುವಕರಿಗೆ ಮಣೆ ನೀಡಲಾಗಿತ್ತು. ಇದೇ ಅಸ್ತ್ರ ಇಲ್ಲೂ ಪ್ರಯೋಗಿಸಿದರೆ ಕೆಲವರಿಗೆ ಟಿಕೆಟ್ ಕೈತಪ್ಪುವ ಭೀತಿ ಎದುರಾಗಿದೆ. ಇತ್ತ ಗುಜರಾತ್ ಚುನಾವಣೆ ಫಲಿತಾಂಶ ಏನೇ ಆದರೂ ಕರ್ನಾಟಕದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸಿದ್ದಾರಾಮಯ್ಯ ಹೇಳಿದ್ದಾರೆ. ಇಂದಿನ ಕಂಪ್ಲೀಟ್ ನ್ಯೂಸ್ ಇಲ್ಲಿದೆ.

Related Video