Asianet Suvarna News Asianet Suvarna News

ಗುಜರಾತ್ ಚುನಾವಣೆ ಗೆಲ್ತಾರಾ ಮೋದಿ ಅಮಿತ್ ಶಾ? ಒಂದೇ ದಿನ 16 ಕ್ಷೇತ್ರ ಸುತ್ತಾಟ!

ಗುಜರಾತ್ ವಿಧಾನಸಭಾ ಚುನಾವಣೆ ಅಂತಿಮ ಹಂತಕ್ಕೆ ತಲುಪಿದೆ. ಇದೀಗ ಎರಡನೇ ಹಂತದ ಮತದಾನಕ್ಕೆ ಅಖಾಡ ರೆಡಿಯಾಗಿದೆ. ಮೋದಿ ಹಾಗೂ ಶಾ ರೋಡ್ ಶೋ, ಅರವಿಂದ್ ಕೇಜ್ರಿವಾಲ್ ಸಮಾವೇಶ ಎದ್ದು ಕಾಣುತ್ತಿದೆ. ಆದರೆ ಕಾಂಗ್ರೆಸ್ ಮಾತ್ರ ಗಂಭೀರವಾದಂತೆ ಕಾಣುತ್ತಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಗುಜರಾತ್ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಒಂದೇ ದಿನ 16 ಕ್ಷೇತ್ರಗಳಲ್ಲಿ ಪ್ರಧಾನಿ ಮೋದಿ ಪ್ರಚಾರ ನಡೆಸಿದ್ದಾರೆ. ಮೋದಿ ಹಾಗೂ ಅಮಿತ್ ಶಾ ಹೊಸ ಹುರುಪಿನಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತ ಆಮ್ ಆದ್ಮಿ ಪಾರ್ಟಿ ಇದೇ ರೀತಿಯಲ್ಲಿ ಪ್ರಚಾರ ಮಾಡುತ್ತಿದೆ. ಆದರೆ ಕಾಂಗ್ರೆಸ್ ಮಾತ್ರ ಸೈಲೆಂಟ್ ಆದ ಹಾಗೇ ಕಾಣುತ್ತಿದೆ. ಮೋದಿ ಹಾಗೂ ಶಾಗೆ ಚುನಾವಣೆ ಅಂದರೆ ಹೊಸ ಹುರುಪು ಸಿಗುತ್ತಾ? ಈ ಬಾರಿ ಚುನಾವಣೆಯಲ್ಲಿ ಅಧಿಕಾರ ಯಾರಿಗೆ? ಇಲ್ಲಿದೆ ಸಂಪೂರ್ಣ ವಿವರ.