ಕುಮಾರಸ್ವಾಮಿ ಊಸರವಳ್ಳಿ ಇದ್ದಂತೆ, ದೊಡ್ಡ ನಾಟಕಕಾರ: ಗುಬ್ಬಿ ಶ್ರೀನಿವಾಸ್ ಕೆಂಡ

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ  ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ವಿರುದ್ಧ ಗುಬ್ಬಿ ಶಾಸಕ ಶ್ರೀನಿವಾಸ್ ತಿರುಗಿ ಬಿದ್ದಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು, (ಜೂನ್.11):  ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ವಿರುದ್ಧ ಗುಬ್ಬಿ ಶಾಸಕ ಶ್ರೀನಿವಾಸ್ ತಿರುಗಿ ಬಿದ್ದಿದ್ದಾರೆ. 

ನಾನ್‌ ಪೇಪರ್ ತೋರ್ಸೋವಾಗ ಕುಮಾರಸ್ವಾಮಿ ಕತ್ತೆ ಕಾಯ್ತಿದ್ನಾ?: ಎಚ್‌ಡಿಕೆ ವಿರುದ್ಧ ಶ್ರೀನಿವಾಸ್ ವಾಗ್ದಾಳಿ

ಕುಮಾರಸ್ವಾಮಿ ಒಬ್ಬ ದೊಡ್ಡ ನಾಟಕಕಾರ, ಒಂತರ ಉಸರವಳ್ಳಿ ಇದ್ದ ಹಾಗೆ, ಅವನೊಬ್ಬನೆ ಸತ್ಯ ಹರಿಶ್ಚಂದ್ರ ಅವನೊಬ್ಬನೆ ಸರ್ವಜ್ಞ ಅಂತ ತಿಳ್ಕೊಂಡಿದ್ದಾನೆ. ಅವನಿಗಿಂತ ಒಳ್ಳೆಯ ವ್ಯಕ್ತಿತ್ವ ತಿಳಿದುಕೊಂಡಿರೋರು ಇದ್ದಾರೆ. ನನ್ನ ವಿರುದ್ಧ ಪ್ರತಿಭಟನೆ ಮಾಡ್ತಾರಂತೆ ಮಾಡ್ಲಿ, ಅವನ ಹಡಗು ಮುಳುಗ್ತಾ ಇದಿಯಲ್ಲ. ಅದಕ್ಕೋಸ್ಕರ ಈ ರೀತಿಯಾಗಿ ಆಡ್ತಾ ಅವ್ನೆ ಕುಮಾರಸ್ವಾಮಿ. ಯಾವನ್ ಬರ್ತಾನೆ ಬರ್ಲಿ ಮನೆ ಮುತ್ತಿಗೆ ಹಾಕೋಕೆ. ಅವನೇ ಬರ್ಲಿ ತಾಕತ್ ಇದ್ರೆ. ಅದ್ಯಾವನು ಬರ್ತಾನೆ ಮನೆ ಹತ್ರ ಬರ್ಲಿ ನಾನು ಅದಕ್ಕೆ ಎಲ್ಲೂ ಹೋಗ್ದೆ ಮನೇಲಿ ಕಾಯ್ತಿದಿನಿ. ಕುಮಾರಸ್ವಾಮಿಗೆ ತಾಕತ್ ಇದ್ರೆ ನನ್ನ ಕ್ಷೇತ್ರದಲ್ಲಿ ನಿಂತು ನನ್ನ ವಿರುದ್ಧ ಗೆದ್ದು ತೋರಿಸಲಿ. ನಾನು ಅವನಿಗೆ ಓಪನ್ ಚಾಲಿಜಿಂಗ್ ಮಾಡ್ತಿನಿ. ನಾನು ಯಾವ ಪಕ್ಷದಿಂದಲಾದ್ರು ನಿಂತು ತೊರಿಸ್ತಿನಿ. ಅವನದು ಪಕ್ಷ ಇದೆಯಲ್ಲ ಅದರಿಂದಲೇ ನಿಂತು ಗೆದ್ದು ತೋರಿಸಲಿ ಅಂತ ಬಹಿರಂಗವಾಗಿಯೇ ಸವಾಲ್‌ ಹಾಕಿದ್ದಾರೆ. 

Related Video