ನಾನು ಕೂಡ ಲೋಕಸಭೆಗೆ ಟಿಕೆಟ್ ಆಕಾಂಕ್ಷಿ, ರೇಣುಕಾಚಾರ್ಯ ಸಿದ್ಧತೆಗೆ ಮುಳ್ಳಾಗ್ತಾರಾ ಸಿದ್ದೇಶ್ವರ್‌

ಮಾಜಿ ಶಾಸಕ ರೇಣುಕಾಚಾರ್ಯ ಸ್ಪರ್ಧೆ ತಯಾರಿ ಬೆನ್ನಲ್ಲೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಕೂಡ ಟಿಕೆಟ್ ಆಕಾಂಕ್ಷಿ ಎಂದು ದಾವಣಗೆರೆ ಸಂಸದ  ಸಿದ್ದೇಶ್ವರ್ ಹೇಳಿಕೆ ನೀಡಿದ್ದಾರೆ.  

Share this Video
  • FB
  • Linkdin
  • Whatsapp

 ದಾವಣಗೆರೆ (ಜು.15): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಕೂಡ ಟಿಕೆಟ್ ಆಕಾಂಕ್ಷಿ ಎಂದು ದಾವಣಗೆರೆ ಸಂಸದ ಜಿ ಎಂ ಸಿದ್ದೇಶ್ವರ್ ಹೇಳಿಕೆ ನೀಡಿದ್ದಾರೆ. ಹೊನ್ನಾಳಿ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಸಹ ಸ್ಪರ್ಧೆ ಮಾಡುತ್ತೇನೆ ಎನ್ನುತ್ತಿದ್ದಾರೆ. ಪಕ್ಷ ಅವರಿಗೆ ಟಿಕೆಟ್ ನೀಡಿದ್ದರೆ ಅವರೆ ನಿಲ್ಲಲಿ. ನಾನು ಮುಂದಿನ ಭಾರಿ ಹೊನ್ನಾಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ನನ್ನ ಕಾರ್ಯಕರ್ತರು ಅಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇದ್ದು ರೇಣುಕಾಚಾರ್ಯ ಎಂಪಿ ಆಕಾಂಕ್ಷಿಯಾದ್ರೆ ನಾನು ಎಂ ಎಲ್ ಗೆ ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ನನಗೂ ರಾಜ್ಯದಲ್ಲಿ ಮಂತ್ರಿಯಾಗಬೇಕೆಂದು ಆಸೆ ಇದೆ ಹಾಗಾಗಿ ಹೊನ್ನಾಳಿ ಯಿಂದ ನಾನು ಸ್ಪರ್ಧಿಸುವುದಕ್ಕೆ ರೆಡಿ ಎಂದು ರೇಣುಕಾಚಾರ್ಯ ಗೆ ಸಿದ್ದೇಶ್ವರ್ ಟಾಂಗ್ ಕೊಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video