ಮೋದಿಯೇ ಆಹ್ವಾನ ನೀಡಿದರೂ ತಿರಸ್ಕರಿಸಿದ್ದೆ, ನನ್ನ ನಡೆಗೆ ಕ್ಷಮೆ ಇರಲಿ: ಮಾಜಿ ಕಾಂಗ್ರೆಸ್ ನಾಯಕ ಅಜಾದ್!

ಪ್ರಧಾನಿ ಮೋದಿ ನೀಡಿದ ಹಲವು ಆಹ್ವಾನವನ್ನು ತಿರಸ್ಕರಿಸಿದ್ದೇನೆ. ಉದ್ದೇಶಪೂರ್ವಕವಾಗಿ ತಿರಸ್ಕರಿಸಿದ್ದೇನೆ. ಆದರೆ ನನ್ನ ನಡವಳಿಕೆಗೆ ನಾನು ಕ್ಷಮೆ ಕೇಳುತ್ತೇನೆ ಎಂದು ಕಾಂಗ್ರೆಸ್ ಮಾಜಿ ನಾಯಕ ಗುಲಾಮ್ ನಬಿ ಆಜಾದ್ ಹೇಳಿದ್ದಾರೆ.ಇದೇ ವೇಳೆ ರಾಹುಲ್ ಗಾಂಧಿಯ ವಿದೇಶಿ ಲಿಂಕ್ಸ್ ಕುರಿತು ಅಜಾದ್ ಬಹಿರಂಗ ಪಡಿಸಿದ್ದಾರೆ. ಅಜಾದ್ ಜೊತೆ ಏಷ್ಯಾನೆಟ್ ನ್ಯೂಸ್ ನಡೆಸಿದ ಸಂವಾದ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ರಾಜ್ಯಸಭೆ ವಿರೋಧ ಪಕ್ಷದ ನಾಯಕನಾಗಿದ್ದ ನನಗೆ ಹಲವು ಕಾರ್ಯಕ್ರಮಗಳಿಗೆ ಪ್ರಧಾನಿ ಮೋದಿ ಆಹ್ವಾನಿಸಿದ್ದಾರೆ. ಖುದ್ದು ಮೋದಿ ಅಹ್ವಾನ ನೀಡಿದ್ದಾರೆ. ಚಹಾ ಕೂಟ, ರಾಯಭಾರಿಗಳ ಭೇಟಿ, ರಾಷ್ಟ್ರಪತಿಗಳ ಭೇಟಿ, ಸರ್ಕಾರಿ ನಿಯೋಜಿತ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಮೋದಿ ನನಗೆ ಆಹ್ವಾನ ನೀಡಿದ್ದಾರೆ. ಆದರೆ ನಾನು ಭಾಗಿಯಾಗಿಲ್ಲ. ಇನ್ನು ಸಂಸತ್ತಿನ ಒಳಗೆ ನಾನು ಮೋದಿ ನೀತಿಗಳ ವಿರುದ್ಧ ಮಾತನಾಡಿದ್ದೇನೆ. ಮೋದಿ ವಿರುದ್ಧ ಕ್ರೂರವಾಗಿ ಮಾತನಾಡಿದ್ದೇನೆ. ಇದಕ್ಕೆ ಕ್ಷಮೆ ಇರಲಿ ಎಂದು ಕಾಂಗ್ರೆಸ್ ಮಾಜಿ ನಾಯಕ ಗುಲಾಮ್ ನಬಿ ಆಜಾದ್ ಹೇಳಿದ್ದಾರೆ. ಏಷ್ಯಾನೆಟ್ ನ್ಯೂಸ್ ಜೊತೆಗಿನ ಸಂವಾದದಲ್ಲಿ ಆಜಾದ್ ಪ್ರಸಕ್ತ ರಾಜಕೀಯ ಹಾಗೂ ಕಾಂಗ್ರೆಸ್ ಅಧಪತನ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಅಜಾದ್ ಜೊತೆಗಿನ ಸಂದರ್ಶನದ ಸಂಪೂರ್ಣ ವಿಡಿಯೋ ಇಲ್ಲಿದೆ 

Add Asianetnews Kannada as a Preferred SourcegooglePreferred

Related Video