Asianet Suvarna News Asianet Suvarna News

ಚುನಾವಣೆ ಬೆನ್ನಲ್ಲೇ ಕಾಂಗ್ರೆಸ್ ಕಂಗಾಲು, ಜಿ ಪರಮೇಶ್ವರ್ ರಾಜೀನಾಮೆಗೆ ನಿರ್ಧಾರ!

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ಜಿ ಪರಮೇಶ್ವರ್ ಅಸಮಾಧಾನ ಹೊರಹಾಕಿ ರಾಜೀನಾಮೆಗೆ ಮುಂದಾಗಿದ್ದಾರೆ.  ಇತ್ತ ಪ್ರಚಾರ ಸಮಿತಿಯಲ್ಲಿರುವ ಎಂಬಿ ಪಾಟೀಲ್ ಕೂಡ ರಾಜ್ಯ ನಾಯಕರ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಕಂಗಾಲಾಗಿದೆ. ಇಂದಿನ ಇಡೀ ದಿನ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪ್ರಣಾಳಿಕೆಯಲ್ಲಿರಬೇಕಾದ ಭರವಸೆಗಳನ್ನು ವೇದಿಕೆಯಲ್ಲಿ ಘೋಷಣೆ ಮಾಡುತ್ತಿದ್ದಾರೆ. ಪ್ರಣಾಳಿಕೆ ಕಮಿಟಿಯಲ್ಲಿ ಚರ್ಚಿಸಿದೇ ಘೋಷಣೆ ಮಾಡುತ್ತಿದ್ದಾರೆ. ನಾಮಕವಾಸ್ತೆ ಪ್ರಣಾಳಿಕೆ ಸಮಿತಿಯಲ್ಲಿ ಇರುವುದಿಲ್ಲ ಎಂದು ಜಿ ಪರಮೇಶ್ವರ್ ರಾಜೀನಾಮೆ ಪತ್ರ ಬರೆದು ನೀಡಿದ್ದಾರೆ. ಈ ಹಿಂದೆ ಅಸಮಾಧಾನ ತೋಡಿಕೊಂಡರು ರಾಜ್ಯ ನಾಯಕರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಜಿ ಪರಮೇಶ್ವರ್ ರಾಜೀನಾಮೆಗೆ ಮುಂದಾಗಿದ್ದಾರೆ. ಇದು ಕಾಂಗ್ರೆಸ್ ಕಂಗೆಡಿಸಿದೆ. ಮಲ್ಲಿಕಾರ್ಜುನ ಖರ್ಗೆ ಸೂಚನೆಯಂತೆ ರಣದೀಪ್ ಸಿಂಗ್ ಸುರ್ಜೆವಾಲ ಪರಮೇಶ್ವರ್ ಮನೆಗೆ ಬೇಟಿ ನೀಡಿ ಮನಒಲಿಸುವ ಪ್ರಯತ್ನ ಮಾಡಿದ್ದಾರೆ. ಇಷ್ಟೇ ಅಲ್ಲ, ಇತ್ತ ಪ್ರಚಾರ ಸಮಿತಿಯಲ್ಲಿರುವ ಎಂಬಿ ಪಾಟೀಲ್ ಅಸಮಾಧಾನ ಹೊರಹಾಕಿದ್ದಾರೆ.