Asianet Suvarna News Asianet Suvarna News

"ನೀತಿ"ರಾಮಯ್ಯನ ಮುಂದೆ “ಪಂಚ ಪ್ರತಿಜ್ಞೆ” ಚಾಲೆಂಜ್..!

ದಿನದಿಂದ ದಿನಕ್ಕೆ ಜೋರಾಗುತ್ತಿರುವ ಜ್ವಾಲೆಯ ಬಿಸಿ ಸರ್ಕಾರಕ್ಕೆ ಬಿಸಿತುಪ್ಪವಾದರೆ. ಮತ್ತೊಂದು ಕಡೆ ವಿರೋಧ ಪಕ್ಷಗಳಿಗೆ ಅದೇ ಆಹಾರ. ಗ್ಯಾರಂಟಿ ಪ್ರತಿಜ್ಞೆ ಈಡೇರಿಸಲು ಸಿಎಂ ಸಿದ್ದರಾಮಯ್ಯ ಇನ್ನಿಲ್ಲದ ಸರ್ಕಸ್ ನಡೆಸ್ತಿದ್ದಾರೆ. ಆಗಸ್ಟ್ 15ರಿಂದ ಉಚಿತ ಸ್ಕೀಮ್ ಜಾರಿಗೆ "ಸಿದ್ಧ" ಸೂತ್ರವೂ ರೆಡಿಯಾಗಿದೆ.
 

ರಾಜ್ಯವು ಅಗ್ನಿಕುಂಡದಲ್ಲಿ ಧಗಧಗಿಸುತ್ತಿರುವ ಗ್ಯಾರಂಟಿ ಜ್ವಾಲೆಯಂತಾಗಿದೆ. ಒಂದು ಕಡೆ ದಿನದಿಂದ ದಿನಕ್ಕೆ ಜೋರಾಗುತ್ತಿರುವ ಜ್ವಾಲೆಯ ಬಿಸಿ ಸರ್ಕಾರಕ್ಕೆ ಬಿಸಿತುಪ್ಪವಾದರೆ. ಮತ್ತೊಂದು ಕಡೆ ವಿರೋಧ ಪಕ್ಷಗಳಿಗೆ ಅದೇ ಆಹಾರ. ಗ್ಯಾರಂಟಿ ಯೋಜನೆ, ಉಚಿತ ಸ್ಕೀಮ್'ಗಳನ್ನು ಘೋಷಿಸಿದ್ದ ಕಾಂಗ್ರೆಸ್‌ಗೆ ಈಗ ಸರ್ಕಾರ ಬಂದ್ಮೇಲೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ. ಇನ್ನು ಈ ಉಚಿತ ಖಚಿತ ನಿಶ್ಚಿತ ಖಂಡಿತ ಇದೆಲ್ಲಾ ಜಾರಿಗೆ ಬರುವುದು ಯಾವಾಗ ಎನ್ನುವುದು ಈಗಿರುವ  ಪ್ರಶ್ನೆ. ಜೋಡೆತ್ತು ಸರ್ಕಾರದ ಅಂಗಳದಿಂದ ಹೊರ ಬಿದ್ದಿರೋ ಸುದ್ದಿಮೂಲಗಳ ಪ್ರಕಾರ ಸ್ವಾತಂತ್ರ್ಯೋತ್ಸವಕ್ಕೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಫಿಕ್ಸ್ ಎನ್ನಲಾಗಿದೆ. ಚುನಾವಣೆಯ ವೇಳೆ ಘೋಷಿಸಿದ್ದ 5 ಗ್ಯಾರಂಟಿಗಳನ್ನು ಆಗಸ್ಟ್ 15ರಿಂದ ಜಾರಿಗೆ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರಂತೆ. ಜೂನ್ 1ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸಿದ್ದರಾಮಯ್ಯನವರು ಘೋಷಣೆ ಮಾಡಲಿದ್ದಾರೆ ಎನ್ನಲಾಗ್ತಿದೆ. ಅಷ್ಟಕ್ಕೂ ಗ್ಯಾರಂಟಿ ಅನುಷ್ಠಾನಕ್ಕೆ ಸಿದ್ರಾಮಯ್ಯ ಸರ್ಕಾರ ಆಗಸ್ಟ್ 15ರ ಮುಹೂರ್ತ ಫಿಕ್ಸ್ ಮಾಡಿರೋದ್ಯಾಕೆ ಗೊತ್ತಾ..? ಈ ವಿಡಿಯೋ ನೋಡಿ