Asianet Suvarna News Asianet Suvarna News

ದೋಸ್ತಿಗಳ ಮಧ್ಯೆ ಹದ್ದು-ಗಿಣಿ ಗುದ್ದಾಟ: ಸಿದ್ದು ಕೊಟ್ಟ ಏಟಿಗೆ ಕುಮಾರಣ್ಣ ಒದ್ದಾಟ!

Sep 24, 2019, 12:49 PM IST

ಬೆಂಗಳೂರು(ಸೆ.24): ಭರ್ತಿ ಒಂದು ವರ್ಷದ ದೋಸ್ತಿ ಬಳಿಕ ಇದೀಗ ಕಾಂಗ್ರೆಸ್-ಜೆಡಿಎಸ್ ನಾಯಕರು, ಇದೀಗ ಪರಸ್ಪರ ದುಷ್ಮನಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ನೀವು ಸಾಕಿದ್ದ ಮುದ್ದಿನ ಗಿಣಿಗಳೇ ಅವರನ್ನು ಕುಕ್ಕಿದವು ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ  ಟೀಕೆಗೆ ಮಾಝಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಹೌದು, ನಾಲ್ಕು ದಶಕಗಳ ರಾಜಕೀಯ ಒಡನಾಟದ ಬಳಿಕವೂ ಹದ್ದನ್ನು ಗಿಣಿ ಎಂದು ಭಾವಿಸಿದ್ದು ನನ್ನ ತಪ್ಪು ಎಂದು ಸಿದ್ದರಾಮಯ್ಯ ಚುಚ್ಚಿದ್ದಾರೆ. ಈ ಮೂಲಕ ಸರ್ಕಾರ ಪತನಕ್ಕೆ ದೇವೇಗೌಡ ಕುಟುಂಬವೇ ಕಾರಣ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..