ಇದು ನನ್ನ ಕೊನೆಯ ಅಧಿವೇಶನ, ಮತ್ತೆ ಬರಲ್ಲ: ಬಿಎಸ್‌ವೈ ಭಾವುಕ

ಇದು ನನ್ನ ಕೊನೆಯ ಅಧಿವೇಶನ, ನಾನು ಮತ್ತೆ ಬರಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ತಿಳಿಸಿದ್ದಾರೆ.

Share this Video
  • FB
  • Linkdin
  • Whatsapp

ಇದು ನನ್ನದು ಕೊನೆಯ ಸಭೆ, ಪ್ರಧಾನಿ ನರೇಂದ್ರ ಮೋದಿ ನನಗೆ ಎಲ್ಲಾ ಅವಕಾಶ ನೀಡಿದ್ದಾರೆ. ನಾನು ಅವರಿಗೆ ಚಿರಋಣಿ ಎಂದು ಬಿಎಸ್‌ವೈ ಗದ್ಗದಿತರಾದರು‌. ಈ ವೇಳೆ ಇಲ್ಲ ನೀವು ಮತ್ತೆ ಆರಿಸಿ ಬರಬೇಕು ಅಂತ ಸದನದಲ್ಲಿ ಪಕ್ಷಾತೀತವಾಗಿ ಶಾಸಕರು ಕೂಗಿದರು. ನಿಮ್ಮ ಅನುಭವ, ಸಲಹೆ ನಮ್ಮ ಸದನಕ್ಕೆ ಅವಶ್ಯಕತೆ ಇದೆ. ಮತ್ತೆ ನೀವು ಸದನಕ್ಕೆ ಬನ್ನಿ ಅಂತ ಪಕ್ಷಾತೀತವಾಗಿ ಸದಸ್ಯರು ಮನವಿ ಮಾಡಿದರು. ಇನ್ನು ಇವತ್ತೆ ಯಾಕೆ ಕೊನೆಯ ದಿನ ಅಂತೀರಿ? ಮತ್ತೆ ಮಾತಾಡೋಕೆ ನಿಮಗೆ ಅವಕಾಶ ಮಾಡಿಕೊಡ್ತಿವಿ. ನಾಳೆಯೂ ಬನ್ನಿ ಎಂದು ಸ್ಪೀಕರ್ ಕಾಗೇರಿ ಹೇಳಿದರು.‌ ಇನ್ನು ಮತ್ತೆ ಚುನಾವಣೆಗೆ ನಿಲ್ಲಿ, ಯಾಕೆ ಕೊನೆ ಚುನಾವಣೆ ಅಂತೀರಾ?. ನಿಮ್ಮ ಹೈಕಮಾಂಡ್ ನಿಮ್ಮನ್ನು ಎಲೆಕ್ಸನ್ ನಿಲ್ಲೋಕೆ ಬಿಡಲ್ವಾ ಎಂದು ಪ್ರತಿಪಕ್ಷ ಸದಸ್ಯರು ಬಿಎಸ್‌ವೈ ಕಾಲೆಳೆದರು.

Related Video