ದೀಪಾವಳಿ ಬಳಿಕ ಚನ್ನಪಟ್ಟಣ ಕುರುಕ್ಷೇತ್ರಕ್ಕೆ ಜೆಡಿಎಸ್ ಭೀಷ್ಮ ದೇವೇಗೌಡರ ಎಂಟ್ರಿ!
ಚನ್ನಪಟ್ಟಣದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಡಿಕೆ ಸುರೇಶ್ ಮಾತುಗಳು ದಳಪತಿಗಳಿಗೆ ಬ್ರಹ್ಮಾಸ್ತ್ರವಾಗಿ ಬಳಕೆಯಾಗುತ್ತಿದೆ. ಕಾಂಗ್ರೆಸ್ ಪಾಳೆಯದಿಂದ ಎರಡು ಪ್ರತ್ಯಸ್ತ್ರಗಳು ಚುನಾವಣಾ ಅಖಾಡಕ್ಕೆ ತಿರುವು ನೀಡುವ ಸಾಧ್ಯತೆ ಇದೆ. ದೀಪಾವಳಿ ನಂತರ ದೇವೇಗೌಡರ ರಂಗಪ್ರವೇಶದಿಂದ ಚುನಾವಣಾ ರಂಗ ಹೇಗೆ ಬದಲಾಗುತ್ತದೆ ಎಂದು ಕಾದು ನೋಡಬೇಕಿದೆ.
ಚನ್ನಪಟ್ಟಣ ಕುರುಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಿತು ಗೌಡಾಗ್ನಿ ಕಿಚ್ಚು..! ಡಿಕೆ ಸಹೋದರದ ಅದೊಂದು ಮಾತು.. ಅಖಾಡದಲ್ಲಿ ಯಾರಿಗೆ ಮುತ್ತು, ಯಾರಿಗೆ ಕುತ್ತು..?
ಮೊಮ್ಮಗನನ್ನು ಗೆಲ್ಲಿಸೋದಕ್ಕೆ ಚನ್ನಪಟ್ಟಣಕ್ಕೆ ಆ್ಯಂಬುಲೆನ್ಸ್'ನಲ್ಲಿ ಬರ್ತಾರಾ ಜೆಡಿಎಸ್ ಭೀಷ್ಮಾಚಾರ್ಯ..? ದೇವೇಗೌಡರ ರಂಗಪ್ರವೇಶ ಬೊಂಬೆನಾಡಿನ ಸಮರಾಂಗಣದ ಚಿತ್ರಣವನ್ನೇ ಬದಲಿಸಿ ಬಿಡುತ್ತಾ..? ಎಲ್ಲವನ್ನೂ "ಬರೆದಿಟ್ಟಿದ್ದೇನೆ, ಬಡ್ಡಿ ಸಮೇತ ವಾಪಸ್ ಕೊಡ್ತೇನೆ.." ಏನಿದು ದಳಪತಿ ಮಾಡಿ ಶಪಥ..! ಗೌಡರ ಗತ್ತು.. ಡಿಕೆ ಬ್ರದರು ಮಾತು... ಕೈಗೆ ಎದುರಾಯ್ತಾ ಆಪತ್ತು..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಗೌಡಾಗ್ನಿ ಜ್ವಾಲೆ..!
ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಮಾಜಿ ಸಂಸದ ಡಿಕೆ ಸುರೇಶ್ ಆಡಿರೋ ಮಾತೇ ಚನ್ನಪಟ್ಟಣ ರಣರಂಗದಲ್ಲಿ ದಳಪತಿಗಳ ಪಾಲಿಗೆ ಬ್ರಹ್ಮಾಸ್ತ್ರ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಾಳೆಯದಿಂದ್ಲೂ ನುಗ್ಗಿ ಬಂದಿರೋ ಆ ಎರಡು ಅಸ್ತ್ರಗಳು ಬೊಂಬೆನಾಡಿನ ಅಖಾಡಕ್ಕೆ ತಿರುವು ಕೊಡಲಿವೆಯಾ..? ಅಷ್ಟಕ್ಕೂ ಯಾವುದು ಆ ಅಸ್ತ್ರ..? ಚನ್ನಪಟ್ಟಣ ಉಪಯುದ್ಧದಲ್ಲಿ ಅಸಲಿ ಆಟ ಈಗ ಶುರುವಾಗಿದೆ.. ಮಾತಿನ ಮಲ್ಲಯುದ್ಧದ ಟ್ರೇಲರ್ ಭಾರೀ ಸದ್ದು ಮಾಡ್ತಾಇದೆ.. ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಮಾಜಿ ಸಂಸದ ಡಿಕೆ ಸುರೇಶ್ ಆಡಿರೋ ಮಾತೇ ದಳಪತಿಗಳ ಪಾಲಿಗೆ ಬ್ರಹ್ಮಾಸ್ತ್ರ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಾಳೆಯದಿಂದ್ಲೂ ನುಗ್ಗಿ ಬಂದಿವೆ ಆ ಎರಡು ಅಸ್ತ್ರಗಳು.
ದೀಪಾವಳಿಯ ನಂತರ ಚನ್ನಪಟ್ಟಣ ಅಖಾಡಕ್ಕೆ ದೇವೇಗೌಡ್ರು ಎಂಟ್ರಿ ಕೊಡ್ತಾರೆ ಅಂತ ಹೇಳಲಾಗ್ತಿದೆ. ದೇವೇಗೌಡ್ರ ರಂಗಪ್ರವೇಶ ಚನ್ನಪಟ್ಟಣ ರಣರಂಗಕ್ಕೆ ತಿರುವು ಕೊಡುತ್ತಾ..? ಕಾಂಗ್ರೆಸ್ ನಾಯಕರಿಗೆ ಗೌಡರ ಭಯ ಶುರುವಾಗಿದೆ ಅನ್ನೋ ಬಿಜೆಪಿ ನಾಯಕರ ಮಾತೇ ನಿಜವಾಗುತ್ತಾ..? ಅಷ್ಟಕ್ಕೂ ಗೌಡರ ಎಂಟ್ರಿಯಿಂದ ಆಗಲಿರೋ ಪರಿಣಾಮ ಎಂಥದ್ದು..? ಕಾದುನೋಡಬೇಕಿದೆ.