ಮತದಾರರ ಪಟ್ಟಿ ವಿವಾದ: ಇದು ಕೆಜಿಎಫ್, ಕಾಂತಾರದ ಕಥೆ ಅಲ್ಲ ಎಂದ ಸಿದ್ದರಾಮಯ್ಯ

ಮತದಾರರ ಪಟ್ಟಿಯ ವಿವಾದದಲ್ಲಿ ಹೊಂಬಾಳೆ ಹೆಸರು ಮುನ್ನಲೆಗೆ ಬಂದಿದ್ದು, ಈ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿದ ಟ್ವೀಟ್ ಸದ್ದು ಮಾಡುತ್ತಿದೆ.
 

First Published Nov 20, 2022, 1:02 PM IST | Last Updated Nov 20, 2022, 1:02 PM IST

ಮತದಾರರ ಪಟ್ಟಿ ಪರಿಷ್ಕರಣೆ ವಿವಾದ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಈ ಅಕ್ರಮದಲ್ಲಿ ಚಿಲುಮೆ ಎಂಬ ಸಂಸ್ಥೆ ಹಾಗೂ ಹೊಂಬಾಳೆ ಹೆಸರು ಕೇಳಿಬಂದಿದ್ದು. ಈ ವಿವಾದದಲ್ಲಿ ಸಚಿವ ಅಶ್ವತ್ಥ್ ನಾರಾಯಣ ಹೆಸರೂ ಕೇಳಿ ಬಂದಿತ್ತು. ಹೊಂಬಾಳೆ ಫಿಲ್ಮಂ ಸಂಸ್ಥೆ ಅಶ್ವತ್ಥ್ ನಾರಾಯಣ ಅವರ ಸಂಬಂಧಿ ವಿಜಯ್ ಕುಮಾರ್ ಅವರದ್ದಾಗಿದ್ದು, ಈ ಹೊಂಬಾಳೆ ಫಿಲ್ಮ್ಸ್ ಬ್ಯಾನರ್'ನಲ್ಲಿ ಕೆಜಿಎಫ್ ಹಾಗೂ ಕಾಂತಾರ ಸಿನಿಮಾಗಳು ಸಿದ್ಧವಾಗಿವೆ. ಹೀಗಾಗಿ ಸಿದ್ದರಾಮಯ್ಯ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಮತದಾರರ ಪಟ್ಟಿ ಪರಿಷ್ಕರಣೆ ಎನ್ನುವುದು ಕೆಜಿಎಫ್ ಚಿತ್ರದ ರಾಕಿಭಾಯ್'ನ ಸೇಡಿನ ಕಥೆಯೂ ಅಲ್ಲ, ಕಾಂತಾರ ಚಿತ್ರದ ಗುಳಿಗ, ಪಂಜುರ್ಲಿಯ ದಂತಕಥೆಯೂ ಅಲ್ಲ. ಯಾರು ಯಾವ ಕೆಲಸ ಮಾಡಬೇಕೋ ಅದನ್ನೇ ಮಾಡಬೇಕು ಎಂದು ಬರೆದುಕೊಂಡಿದ್ದಾರೆ. ಸಿದ್ಧು ಮಾಡಿರೋ ಈ ಟ್ವೀಟ್ ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ.

ಪಾಂಡವಪುರದಲ್ಲಿ ಮೂರು ದಿನಗಳ ಪುನೀತ್ ಹಬ್ಬ