ಕರ್ನಾಟಕ ಚುನಾವಣೆ ಮೂಲಕ ಕ್ರಾಂತಿ ಬರೆದ ಆಯೋಗ, ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ!

ಮೇ.10ಕ್ಕೆ ಮತದಾನ, ಮೇ.13ಕ್ಕೆ ಫಲಿತಾಂಶ, ಕರ್ನಾಟಕ ಚುನಾವಣಾ ಕುತೂಹಲ, ಯಾರ ಪರ ಇದೆ ಒಲವು?ದಿನಾಂಕ ಘೋಷಣೆಯಾದ ಬೆನ್ನಲ್ಲೇ ಚುನಾವಣಾ ಸಮೀಕ್ಷೆ ಪ್ರಕಟ, ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಮತದಾರನ ತೀರ್ಪು ಹೇಗಿತ್ತು ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ 

Share this Video
  • FB
  • Linkdin
  • Whatsapp

ವಿಶೇಷ ಚೇತನರು ಮತಗಟ್ಟಗೆ ತೆರಳಿ ಮತ ಹಾಕಬೇಕಿಲ್ಲ. ಆಯೋಗದ ಅಧಿಕಾರಿಗಳು ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಜಾರಿಗೆ ತರುತ್ತಿದೆ. ಇಂದು ಚುನಾವಣಾ ಆಯೋಗ ಸುದ್ದಿಗೋಷ್ಠಿ ಮೂಲಕ ಕರ್ನಾಟಕ ಚುನಾವಣಾ ದಿನಾಂಕ ಘೋಷಿಸಿದೆ. ಇದರ ಜೊತೆಗೆ ವಿಶೇಷ ಚೇತನರ ಮತದಾನಕ್ಕೆ ಮಹತ್ವದ ನಿರ್ಧಾರ ಕೈಗೊಂಡಿದೆ. ಮೇ.10 ರಂದು ಮತದಾನ ನಡೆದರೆ, ಮೇ.13ಕ್ಕೆ ಫಲಿತಾಂಶ ಘೋಷಣೆಯಾಗಲಿದೆ. ಚುನಾವಣಾ ದಿನಾಂಕ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ ನಿಸ್ಪಕ್ಷಪಾತ ಚುನಾವಣೆಗೆ ಆಗ್ರಹಿಸಿದೆ. ಗುಜರಾತ್‌ನಲ್ಲಿ ಬಳಸಿದ ಮತಯಂತ್ರ ಬೇಡ ಎಂದಿದೆ. ಇದರ ಬೆನ್ನಲ್ಲೇ ಆಯೋಗ ಮಹತ್ವದ ಘೋಷಣೆ ಮಾಡಿದೆ. ಕರ್ನಾಟಕ 224 ಕ್ಷೇತ್ರಗಳಲ್ಲಿ ಹೊಸ ಮತಯಂತ್ರಗಳ ಬಳಕೆಯಾಗಲಿದೆ ಎಂದಿದೆ.

Related Video