Asianet Suvarna News Asianet Suvarna News

ಗೊಡ್ಡು ಬೆದರಿಕೆಗಳಿಗೆ ಹೆದರುವ ಮಗನಲ್ಲ: ಬಿಜೆಪಿ ತನಿಖಾಸ್ತ್ರಕ್ಕೆ ಡಿಕೆಶಿ ತಿರುಗೇಟು

Karnataka Politics: ಹಗರಣಗಳನ್ನು ಹೊರಗೆ ತಂದು ನಮ್ಮನ್ನು ಗಲ್ಲಿಗೆ ಹಾಕಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಹೇಳಿದ್ದಾರೆ

Sep 6, 2022, 6:58 PM IST

ಬೆಂಗಳೂರು (ಸೆ. 06): ಬಿಜೆಪಿ ತನಿಖಾಸ್ತ್ರಕ್ಕೆ ಡಿಕೆ ಶಿವಕುಮಾರ್‌ (D K Shivakumar) ತಿರುಗೇಟು ನೀಡಿದ್ದಾರೆ. "ಹಗರಣಗಳನ್ನು ಹೊರಗೆ ತಂದು ನಮ್ಮನ್ನು ಗಲ್ಲಿಗೆ ಹಾಕಲಿ, ಬಿಜೆಪಿಯವರ (BJP) ಗೊಡ್ಡು ಬೆದರಿಕಗೆ ಹೆದರುವ ಮಗ ನಾನಲ್ಲ" ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಹೇಳಿದ್ದಾರೆ. ಡಿಕೆಶಿ ಸವಾಲ್‌ಗೆ ಇಂಧನ ಸಚಿವ ಸುನೀಲ್‌ ಕುಮಾರ್‌ (Sunil Kumar) ತಿರುಗೇಟು ನೀಡಿದ್ದಾರೆ. "ಡಿಕೆ ಶಿವಕುಮಾರ್‌ ಸವಾಲನ್ನು ನಾನು ಸ್ವೀಕರಿಸುತ್ತೇನೆ, ಅಧಿವೇಶನ ಮುಗಿದ ನಂತರ ಮಾಹಿತಿ ಮುಂದಿಡುತ್ತೇನೆ, ಸೋಲಾರ್‌ ಹಗರಣದ ಬಗ್ಗೆ ಮಾಹಿತಿ ಇಡುತ್ತೇನೆ" ಎಂದು ಸಚಿವ ಸುನೀಲ್‌ ಕುಮಾರ್‌ ಹೇಳಿದ್ದಾರೆ 

ಎಸ್ಸಿ,ಎಸ್ಟಿಗೆ ಫ್ರೀ ಕರೆಂಟ್ ಗೊಂದಲ: ಸಿದ್ದು ಆರೋಪಕ್ಕೆ ಸುನಿಲ್ ಕುಮಾರ್ ಗುದ್ದು