Asianet Suvarna News Asianet Suvarna News

RR ನಗರ ಅಖಾಡದಲ್ಲಿ ಶಿಷ್ಯನನ್ನು ಮಖಾಡೆ ಮಲಗಿಸಲು ಡಿಕೆ ಮಾಸ್ಟರ್ ಪ್ಲ್ಯಾನ್..!

Oct 2, 2020, 3:22 PM IST

ಬೆಂಗಳೂರು (ಅ. 02): ಆರ್‌ ಆರ್ ನಗರ ಉಪಚುನಾವಣಾ ಕಣ ರಂಗೇರಿದೆ. ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಡಿಕೆ ಶಿವಕುಮಾರ್‌ಗೆ ಇದು ಮೊದಲ ಉಪಚುನಾವಣೆ. ಆರ್‌ಆರ್‌ ನಗರವನ್ನು ಕೈ ವಶ ಮಾಡಿಕೊಳ್ಳುವ ಸವಾಲು ಡಿಕೆ ಸಾಹೇಬರ ಮುಂದಿದೆ. 

RR ನಗರಕ್ಕೆ ಡಿಕೆ ರವಿ ಪತ್ನಿ ಬದಲು ಅಚ್ಚರಿ ಹೆಸರು; ಕುತೂಹಲ ಮೂಡಿಸಿದೆ ಕಾಂಗ್ರೆಸ್ ನಾಯಕರ ಸಭೆ

ಒಂದು ಕಾಲದ ಶಿಷ್ಯ ಮುನಿರತ್ನರನ್ನು ಆರ್ ಆರ್‌ ನಗರ ಚುನಾವಣಾ ಅಖಾಡದಲ್ಲಿ ಮಖಾಡೆ ಮಲಗಿಸಲು ಡಿಕೆ ಬ್ರದರ್ಸ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಈಗಾಗಲೇ ಟಿಕೆಟ್‌ ಆಕಾಂಕ್ಷಿಗಳಲ್ಲಿ ನಾಲ್ವರು ರೇಸ್‌ನಲ್ಲಿದ್ದಾರೆ. ಇದರ ಮಧ್ಯೆ ಡಿಕೆಶಿ ಅಚ್ಚರಿ ಅಭ್ಯರ್ಥಿಯನ್ನು ನಿಲ್ಲಿಸುತ್ತೇವೆ ಎಂದು ಹೇಳಿಕೆ ಕೊಡುತ್ತಿದ್ದಾರೆ. ಹಾಗಾದರೆ ಮುನಿರತ್ನಗೆ ಠಕ್ಕರ್ ಕೊಡುವ ಆ ಅಭ್ಯರ್ಥಿ ಯಾರಿರಬಹುದು? ಡಿಕೆ ಬ್ರದರ್ಸ್ ಪ್ಲಾನ್ ಏನಿರಬಹುದು? ನೋಡೋಣ ಬನ್ನಿ...!