ನಾವು ಅಧಿಕಾರಕ್ಕೆ ಬಂದ್ರೆ 7ನೇ ವೇತನ ಆಯೋಗ ಜಾರಿ: ಸರ್ಕಾರಿ ನೌಕರರ ಪರ ಕಾಂಗ್ರೆಸ್‌ ಬ್ಯಾಟಿಂಗ್‌

ನಾವು ಅಧಿಕಾರಕ್ಕೆ ಬಂದ್ರೆ 7ನೇ ವೇತನ ಆಯೋಗ ಜಾರಿಗೆ ತರುವುದಾಗಿ ಬೆಳಗಾವಿಯಲ್ಲಿ ಸಿದ್ದರಾಮಯ್ಯ, ಡಿಕೆಶಿ ತಿಳಿಸಿದ್ದಾರೆ.
 

First Published Mar 1, 2023, 1:24 PM IST | Last Updated Mar 1, 2023, 1:24 PM IST

ರಾಜ್ಯ ಸರ್ಕಾರಿ ನೌಕರರ ಪರ  ಕಾಂಗ್ರೆಸ್‌ ಬ್ಯಾಟಿಂಗ್‌ ಬೀಸಿದೆ. 5 ವರ್ಷಗಳ ಹಿಂದೆ ನೌಕರರಿಗೆ ೬ನೇ ವೇತನ ಆಯೋಗ ಜಾರಿ ಮಾಡಿದ್ದೆ. 10,600 ಕೋಟಿ ಹೊರೆಯಾದ್ರೂ ನಾನು ಜಾರಿ ಮಾಡಿದ್ದೆ ಎಂದು ಬೆಳಗಾವಿಯಲ್ಲಿ ಸಿದ್ದರಾಮಯ್ಯ ತಿಳಿಸಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ, ಸುಳ್ಳು ಹೇಳುತ್ತಾರೆ. ನಾವು ಅಧಿಕಾರಕ್ಕೆ ಬಂದ್ಮೇಲೆ ಆಯೋಗದ ವರದಿ ಮಾಡುತ್ತೇವೆ. ಸುಳ್ಳು ಹೇಳಿ ಬಿಜೆಪಿ ಸರ್ಕಾರ ಸರ್ಕಾರಿ ನೌಕರರ ಮೂಗಿಗೆ ತುಪ್ಪ ಸವರುತ್ತಿದೆ. ನೀತಿ ಸಂಹಿತೆ ಜಾರಿಯಾಗಲು ಒಂದು 20 ದಿನ ಇರಬಹುದು ಅಷ್ಟೇ. ಒಂದೂವರೆ ತಿಂಗಳು ಸರ್ಕಾರಿ ಕಚೇರಿಗಳಲ್ಲಿ ಕೆಲಸ ನಡೆಯಲ್ಲ. ನೌಕರರು ಕೆಲಸಕ್ಕೆ ಹೋಗದಿದ್ರೆ ಆಡಳಿತ ಯಂತ್ರ ಕುಸಿಯುತ್ತೆ ಎಂದು ಸಿದ್ದರಾಮಯ್ಯ  ಹೇಳಿದ್ದಾರೆ.