ಡಿಜೆ ಹಳ್ಳಿ ಗಲಭೆ: ಸಂಪತ್‌ ರಾಜ್‌ಗೆ ಕ್ಲೀನ್‌ಚಿಟ್, ಅಖಂಡ ಅಸಮಾಧಾನ; ಕಾಂಗ್ರೆಸ್‌ನಲ್ಲಿ ಏನಾಗ್ತಿದೆ.?

ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಬಿಬಿಎಂಪಿ ಮೇಯರ್‌ ಸಂಪತ್‌ರಾಜ್‌ ಪಾತ್ರವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಮ್ಮ ಶಿಷ್ಯನಿಗೆ ಕ್ಲೀನ್ ಚೀಟ್ ಕೊಟ್ಟಿದ್ದಾರೆ. 

First Published Feb 27, 2021, 11:08 AM IST | Last Updated Feb 27, 2021, 11:08 AM IST

ಬೆಂಗಳೂರು (ಫೆ. 27): ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಬಿಬಿಎಂಪಿ ಮೇಯರ್‌ ಸಂಪತ್‌ರಾಜ್‌ ಪಾತ್ರವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಮ್ಮ ಶಿಷ್ಯನಿಗೆ ಕ್ಲೀನ್ ಚೀಟ್ ಕೊಟ್ಟಿದ್ದಾರೆ. 

ಸಿದ್ದು- ಡಿಕೆಶಿ ನಡುವಿನ ಗುದ್ದಾಟಕ್ಕೆ ಕಾರಣವಾಯ್ತಾ ಕಾಂಗ್ರೆಸ್ - ಜೆಡಿಎಸ್ ಮೇಯರ್ ಮೈತ್ರಿ?

ಗಲಭೆಯಲ್ಲಿ ಸಂಪತ್‌ರಾಜ್‌ ಅವರು ಯಾವುದೇ ರೀತಿಯಲ್ಲೂ ಭಾಗವಹಿಸಿಲ್ಲ. ಬಿಜೆಪಿ ಸರ್ಕಾರವು ಪಕ್ಷದ ಮೇಲೆ ಆರೋಪ ಮಾಡಲು ಈ ರೀತಿ ಸುಳ್ಳು ಆರೋಪ ಮಾಡಿದೆ. ಘಟನೆ ಕುರಿತು ವರದಿ ಪಡೆದಿದ್ದು, ಸಂಪತ್‌ರಾಜ್‌ ಮಾತ್ರವಲ್ಲ ಕಾಂಗ್ರೆಸ್‌ ಪಕ್ಷದ ಯಾರೊಬ್ಬರೂ ಈ ಗಲಭೆಯಲ್ಲಿ ಭಾಗವಹಿಸಿಲ್ಲ. ರಾಜ್ಯ ಸರ್ಕಾರದ ವೈಫಲ್ಯವೇ ಘಟನೆಗೆ ಕಾರಣ. ತಮ್ಮ ವೈಫಲ್ಯ ಮುಚ್ಚಿ ಹಾಕಿಕೊಳ್ಳಲು ಸಂಪತ್‌ರಾಜ್‌ ಮೇಲೆ ಆರೋಪ ಮಾಡಿದ್ದಾರೆ. ಶ್ರೀನಿವಾಸಮೂರ್ತಿ ಅವರು ವೈಯಕ್ತಿಕ ಕಾರಣಗಳಿಗಾಗಿ ಆ ರೀತಿ ಹೇಳಿಕೆ ನೀಡಿದ್ದಾರೆ. ಸಂಪತ್‌ರಾಜ್‌ಗೂ ಘಟನೆಗೂ ಸಂಬಂಧವಿಲ್ಲ ಎಂದು ಶಿಷ್ಯನ ಪರ ಬ್ಯಾಟಿಂಗ್ ಮಾಡಿರೋದು ಅಖಂಡ ಅಸಮಾಧಾನಕ್ಕೆ ಕಾರಣವಾಗಿದೆ.