ಪ್ರಧಾನಿ ಮೋದಿಗೆ ದೂರು ಕೊಡ್ತೇನೆಂದ ಕುಮಾರಸ್ವಾಮಿಗೆ ತಿರುಗೇಟು ಕೊಟ್ಟ ಡಿ.ಕೆ. ಶಿವಕುಮಾರ್

ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಹಗರಣಗಳ ಬಗ್ಗೆ ಪ್ರಧಾನಮಂತ್ರಿಗೆ ದೂರು ಕೊಡ್ತೇನೆಂದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಖಡಕ್‌ ತಿರುಗೇಟು ಕೊಟ್ಟ ಡಿಸಿಎಂ ಡಿ.ಕೆ. ಶಿವಕುಮಾರ್.

First Published Aug 6, 2023, 7:04 PM IST | Last Updated Aug 6, 2023, 7:04 PM IST

ಬೆಂಗಳೂರು (ಆ.06): ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಧ್ಯೆ ಏಟು ಎದುರೇಟು ಈಗ ಜೋರಾಗಿದೆ. ಬಿಬಿಎಂಪಿಯಲ್ಲಿ 710 ಕೋಟಿ ರೂ. ಹಣ ಬಿಡುಗಡೆ ಆಗಿರುವ ಬಗ್ಗೆ ಕಮೀಷನ್‌ ವ್ಯವಹಾರ ಕುದುರಿಸಲಾಗಿದೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದು, ಇದಕ್ಕೆ ಡಿಕೆಶಿವಕುಮಾರ್‌ ಕೂಡ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಮೋದಿಗೆ ದೂರು ಕೊಡ್ತೇನೆ ಎಂದು ಹೇಳಿದ ಕುಮಾರಸ್ವಾಮಿಗೆ ಕನಕಪುರ ಬಂಡೆ ಖ್ಯಾತಿಯ ಡಿಕೆಶಿ ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ಕೇವಲ ಮಾತನಾಡಿದರೆ ಸಾಲದು, ಅದಕ್ಕೆ ತಕ್ಕಂತೆ ದಾಖಲೆಗಳನ್ನು ಕೂಡ ಕೊಡಬೇಕು. ಈಗ ಪ್ರಧಾನಮಂತ್ರಿ ಮೋದಿವರೆಗೂ ಹೋಗಿದ್ದಾರೆ. ಎಚ್‌ಡಿಕೆ ಆರೋಪಕ್ಕೆ ತಕ್ಕಂತೆ ನಾನೂ ಕೂಡ ಉತ್ತರ ಕೊಡಲು ಸಿದ್ಧನಾಗಿದ್ದೇನೆ. ಕುಮಾರಸ್ವಾಮಿ ಈಗ ನಿಮ್ಮ ಬಳಿ ಮಾತನಾಡಿದ್ದರೆ ಓಕೆ ಎನ್ನುತ್ತಿದ್ದೆ, ಈಗ ಪ್ರಧಾನಮಂತ್ರಿವರೆಗೂ ಹೋಗಿದ್ದು, ಅವರಿಗೆ ಎಲ್ಲಿ ಕೊಡಬೇಕೋ ಅಲ್ಲಿ ತಕ್ಕ ಉತ್ತರವನ್ನು ಕೊಡುತ್ತೇನೆ ಎಂದು ಮಾಧ್ಯಮಗಳಿಗೆ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

Video Top Stories