ಶಿವ ಕೃಷ್ಣತಂತ್ರ! ಸೋಲು ಗೆಲುವು ಹೋರಾಟ ಏನಿದು ಬಂಡೆ ಮಾತಿನ ಮರ್ಮ? ಯಶಸ್ಸಿನ ಸೂತ್ರವೇನು?

ಮುಖ್ಯಮಂತ್ರಿ ಪಟ್ಟದ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್, ಯಶಸ್ಸಿಗಾಗಿ ಪ್ರಯತ್ನ ಮತ್ತು ಪ್ರಾರ್ಥನೆ ಮಾಡುತ್ತಿದ್ದಾರೆ. ಚಾಮುಂಡಿ ಬೆಟ್ಟದ ಹೇಳಿಕೆ ವಿವಾದದ ನಡುವೆ, ಧರ್ಮದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅವರ ಸಂಕಲ್ಪ ಈಡೇರುತ್ತದೆ ಎಂದು ಶ್ರೀಗಳು ಆಶೀರ್ವದಿಸಿದ್ದಾರೆ.

Share this Video
  • FB
  • Linkdin
  • Whatsapp

ಡಿ.ಕೆ.ಶಿವಕುಮಾರ್ ಮತ್ತೆ ಪ್ರಯತ್ನ, ಪ್ರಾರ್ಥನೆಯ ಮಾತನಾಡಿದ್ದಾರೆ.. ಸೋಲು, ಗೆಲುವು, ಹೋರಟ ಅನ್ನೋ ಮಾರ್ಮಿಕ ನುಡಿಗಳನಾಡಿದ್ದಾರೆ.. ಜೊತೆಗೆ ಪ್ರಂಪಚದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಒಂದು ಅವಕಾಶ ಸಿಗುತ್ತೆ ಅಂದಿದ್ದಾರೆ ಕನಕಾಧಿಪತಿ.. ಅಷ್ಟಕ್ಕೂ ಡಿ.ಕೆ.ಶಿವಕುಮಾರ್ ಯಾವ ಸೋಲು-ಗೆಲುವಿನ ಬಗ್ಗೆ ಮಾತನಾಡ್ತಿದ್ದಾರೆ.? ಅವರು ಯಾವ ಅವಕಾಶಕ್ಕಾಗಿ ಕಾದಿದ್ದಾರೆ..? ಅ ಅವಕಾಶ ಸಿಕ್ಕಾಗ ಅದನ್ನ ಯಶಸ್ಸಾಗಿ ಪರಿವರ್ತಿಸೋಕೆ ಬಂಡೆ ಬಳಿಯಿರೋ ಮಹಾಭಾರತದ ಆ ಸೂತ್ರವೇನು..? 

ಸಿಎಂ ಪಟ್ಟದ ಮೇಲೆ ಕೂರ್ಬೇಕು ಅನ್ನೋದು ಡಿ.ಕೆ.ಶಿವಕುಮಾರ್ ಅವರ ಆಸೆ, ಸಂಕಲ್ಪ.. ಅದಕ್ಕಾಗಿಯೇ ಪ್ರಯತ್ನ, ಪ್ರಾರ್ಥನೆಯನ್ನೂ ಮಾಡ್ತಿರೋದು ಡಿಕೆಶಿ.. ಈಗಾಗಲೇ ಬಂಡೆ ಹಲವು ದೈವಬಲ, ಸ್ವಾಮೀಜಿಗಳ ಆಶೀರ್ವಾದ ಸಿಕ್ಕಾಗಿದೆ.. ಇದೀಗ ಡಿಕೆ ಸಂಕಲ್ಪ ಈಡೇರುತ್ತೆ ಅನ್ನೋ ಆಶೀರ್ವಾದವನ್ನ ಮತ್ತೊಬ್ರು ಶ್ರೀಗಳು ಮಾಡಿದ್ದಾರೆ.. ಹಾಗೇನೆ ಕನಕಾಧಿಪತಿಗೆ ಇರೋ ಆ ಗುಣ ಎಲ್ಲಾ ರಾಜಕೀಯ ನಾಯಕರಲ್ಲಿಯು ಇರ್ಬೇಕು ಅಂತ್ಹೇಳಿ ಅವರನ್ನ ಹಾಡಿ ಹೊಗಳಿದ್ದಾರೆ.

ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಅನ್ನೋ ಮೂಲಕ ವಿವಾದದ ಕಿಚ್ಚನ್ನ ಹಚ್ಚಿದ್ರು ಡಿ.ಕೆ.ಶಿವಕುಮಾರ್.. ಬಂಡೆ ಬಾಯಿಂದ ಈ ಮಾತು ಹೊರಬೀಳ್ತಾಯಿದ್ಹಾಗೆ ವಿಪಕ್ಷಗಳು ಮುಗಿಬಿದ್ದಿವೆ.. ಇದೀಗ ನಿಜವಾದ ಧರ್ಮ ಅಂದ್ರೆ ಏನು..? ಆ ಬಗ್ಗೆ ತಮ್ಮ ಅಭಿಪ್ರಾಯ ಏನು ಅನ್ನೋದನ್ನ ಹೇಳೋದ್ರ ಮೂಲಕ ವಿಪಕ್ಷಗಳಿಗೆ ಕೌಂಟರ್ ಕೊಟ್ಟಿದ್ದಾರೆ ಡಿ.ಕೆ.ಶಿವಕುಮಾರ್.

Related Video