News Hour: ಮೇಲ್ಮನವಿ ವಾಪಾಸ್ ಪಡೆದ ಡಿಕೆಡಿ, ಜೈಲಿಗೆ ಹೋಗೋಕೆ ರೆಡಿಯಾಗಿ ಎಂದ ಬಿಜೆಪಿ!
ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಹೈಕೋರ್ಟ್‌ನಲ್ಲಿ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ. ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆಗೂ ಮುನ್ನವೇ ತಮ್ಮ ಮೇಲ್ಮನವಿಯನ್ನು ವಾಪಾಸ್ ಪಡೆದುಕೊಂಡಿದ್ದಾರೆ. ಬಿಎಸ್‌ವೈ ಸರ್ಕಾರದ ಸಿಬಿಐ ತನಿಖೆ ಪ್ರಶ್ನಿಸಿ ಡಿಕೆ ಶಿವಕುಮಾರ್ ಅರ್ಜಿ ಸಲ್ಲಿಕೆ ಮಾಡಿದ್ದರು.
ಬೆಂಗಳೂರು (ನ.29): ಆದಾಯಕ್ಕೂ ಮೀರಿದ ಆಸ್ತಿ ಪ್ರಕರಣದ ಕೇಸ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅಪಾಯದ ಹೆಜ್ಜೆ ಇಟ್ಟಿದ್ದಾರೆ. ಕರ್ನಾಟಕ ಸರ್ಕಾರ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ವಾಪಾಸ್ ಪಡೆದುಕೊಂಡ ಬೆನ್ನಲ್ಲಿಯೇ, ಹೈಕೋರ್ಟ್ ನಿರ್ಧಾರದ ವಿರುದ್ಧ ತಾವು ಸಲ್ಲಿಸಿದ್ದ ಮೇಲ್ಮನವಿಯನ್ನು ವಾಪಾಸ್ ಪಡೆದುಕೊಂಡಿದ್ದಾರೆ.
ಬಿಎಸ್‌ವೈ ಅಧಿಕಾರದಲ್ಲಿದ್ದ ವೇಳೆ ರಾಜ್ಯ ಸರ್ಕಾರದ ಸಿಬಿಐ ತನಿಖೆಯ ಅದೇಶದ ಕುರಿತಾಗಿ ಹೈಕೋರ್ಟ್‌ನ ಏಕಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದ ಡಿಕೆ ಶಿವಕುಮಾರ್ ಅಲ್ಲಿ ಹಿನ್ನಡೆ ಕಂಡಿದ್ದರು. ಇದರ ವಿರುದ್ಧ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಅವರು ಮೇಲ್ಮನವಿ ಸಲ್ಲಿಕೆ ಮಾಡಿದ್ದರು. ಈಗ ವಿಚಾರಣೆಗೂ ಮುನ್ನವೇ ಈ ಅರ್ಜಿಯನ್ನು ಅವರು ಹಿಂಪಡೆದಿದ್ದಾರೆ.
ಈಗ ಈ ಪ್ರಕರಣದಲ್ಲಿ ಮುಂದೆ ಸಿಬಿಐ ಮಾಡೋದೇನು ಎನ್ನುವ ಬಗ್ಗೆ ಕುತೂಹಲ ಎದ್ದಿದೆ. ಕರ್ನಾಟಕ ಸರ್ಕಾರ ಮಾಡಿರುವ ತೀರ್ಮಾನ ಅಸಾಂವಿಧಾನಿಕ ಎಂದು ಹೈ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ. ಅಥವಾ ಕ್ಯಾಬಿನೆಟ್ ನಿರ್ಧಾರ ತಮಗೆ ಗೊತ್ತೇ ಇಲ್ಲ ಎನ್ನುವಂತೆ ವರ್ತಿಸಿ, ಮೂರು ತಿಂಗಳ ಒಳಗೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ಈ ನಡುವೆ ಬಿಜೆಪಿ ನೀವು ಜೈಲಿಗೆ ಹೋಗೋದು ಫಿಕ್ಸ್ ಎಂದು ಹೇಳಿದೆ.