ಅತೃಪ್ತ ಶಾಸಕರ ಟೀಂ ದೆಹಲಿಗೆ, ಖಾಲಿ ಇರುವ 4 ಸ್ಥಾನಗಳಿಗಾಗಿ ಸರ್ಕಸ್..!
- ಸಚಿವ ಸ್ಥಾನದ ವಂಚಿತರಿಂದ ವರಿಷ್ಠರಿಗೆ ಮೊರೆ
- ಯೋಗೇಶ್ವರ್, ಜಾರಕಿಹೊಳಿ ಅವರಿಂದ ವರಿಷ್ಠರಿಗೆ ಮೊರೆ
- ಶ್ರೀಮಂತ ಪಾಟೀಲ್, ಶಂಕರ್‌ರಿಂದಲೂ ಭೇಟಿಗೆ ಪ್ರಯತ್ನ
- ಸಂಪುಟದಲ್ಲಿ ಖಾಲಿ ಇರುವ 4 ಸ್ಥಾನಗಳ ಮೇಲೆ ಇವರ ಕಣ್ಣು
ಬೆಂಗಳೂರು (ಆ. 10): ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಉದ್ಭವಿಸಿರುವ ಸಚಿವ ಸ್ಥಾನ ವಂಚಿತರು ಹಾಗೂ ಖಾತೆ ಹಂಚಿಕೆ ಬಿಕ್ಕಟ್ಟು ಇದೀಗ ದೆಹಲಿ ಅಂಗಳಕ್ಕೆ ಸ್ಥಳಾಂತರಗೊಂಡಿದೆ.
ಆ. 15 ರ ಬಳಿಕ ಕರ್ನಾಟಕದಲ್ಲಿ ಮತ್ತೆ ಲಾಕ್‌ಡೌನ್ ಸುಳಿವು ನೀಡಿದ ಸಚಿವ ಅಶೋಕ್!
ಸಚಿವ ಸ್ಥಾನ ಕಳೆದುಕೊಂಡಿರುವ ಸಿ.ಪಿ.ಯೋಗೇಶ್ವರ್, ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಕಳೆದುಕೊಂಡಿರುವ ರಮೇಶ್ ಜಾರಕಿಹೊಳಿ, ಸಚಿವ ಸ್ಥಾನದಿಂದ ಕೈಬಿಟ್ಟಅವರ ಬೆಂಬಲಿಗ ಶ್ರೀಮಂತ್ ಪಾಟೀಲ್, ಮತ್ತೊಬ್ಬ ವಂಚಿತ ಆರ್.ಶಂಕರ್ ಅವರು ದೆಹಲಿಗೆ ತೆರಳಿ ವರಿಷ್ಠರ ಮೊರೆ ಹೋಗುತ್ತಿದ್ದಾರೆ. ಸದ್ಯ ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಉಳಿದಿವೆ. ಹೀಗಾಗಿ ಇವುಗಳ ಮೇಲೆ ಕಣ್ಣು ಹಾಕಿರುವ ಅಸಮಾಧಾನಿತ ಮುಖಂಡರು ಸಚಿವ ಸ್ಥಾನಕ್ಕಾಗಿ ಪ್ರಯತ್ನ ಮುಂದುವರೆಸಿದ್ದಾರೆ.