'13 ತಿಂಗಳು 13 ಗುಂಡಿ, ಮೈತ್ರಿ ಸರ್ಕಾರ ಪತನ, ಡಿಕೆಶಿ ನಿಜವಾದ ಮೀರ್‌ ಸಾದಿಕ್'

‘ಸಮ್ಮಿಶ್ರ ಸರ್ಕಾರದಲ್ಲಿ ಜೋಡೆತ್ತು’ ಎಂದು ಹೇಳಿಕೊಂಡು ನಂಬಿಕೆ ದ್ರೋಹ ಮಾಡಿದ್ದಲ್ಲದೇ, ಕಾಂಗ್ರೆಸ್‌ನವರೇ ಮೈತ್ರಿ ಸರ್ಕಾರವನ್ನು ಪತನ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್‌ ನಿಜವಾದ ಮೀರ್‌ ಸಾದಿಕ್‌ ಎಂದು ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣ ನೇರ ಆರೋಪ ಮಾಡಿದ್ದಾರೆ.
 
Share this Video
  • FB
  • Linkdin
  • Whatsapp

ಬೆಂಗಳೂರು (ಅ. 22): ಆರ್‌ಆರ್‌ ನಗರ ಹಾಗೂ ಶಿರಾ ಉಪಚುನಾವಣೆ ಅಖಾಡ ರಂಗೇರುತ್ತಿದ್ದಂತೆ ರಾಜಕೀಯ ನಾಯಕರ ಆರೋಪ ಪ್ರತ್ಯಾರೋಪ ಕೂಡಾ ಹೆಚ್ಚಾಗುತ್ತಿದೆ. ಡಿಕೆಶಿ- ಅಶ್ವಥ್ ನಾರಾಯನ್ ನಡುವಿನ ವಾಕ್ಸಮರ ಸಖತ್ ಪಂಚಿಂಗ್ ಆಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಸಮ್ಮಿಶ್ರ ಸರ್ಕಾರದಲ್ಲಿ ಜೋಡೆತ್ತು’ ಎಂದು ಹೇಳಿಕೊಂಡು ನಂಬಿಕೆ ದ್ರೋಹ ಮಾಡಿದ್ದಲ್ಲದೇ, ಕಾಂಗ್ರೆಸ್‌ನವರೇ ಮೈತ್ರಿ ಸರ್ಕಾರವನ್ನು ಪತನ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್‌ ನಿಜವಾದ ಮೀರ್‌ ಸಾದಿಕ್‌ ಎಂದು ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣ ನೇರ ಆರೋಪ ಮಾಡಿದ್ದಾರೆ.

ಮೀರ್ ಸಾದಿಕ್ ಎಂದ ಅಶ್ವಥ್ ನಾರಾಯನ್‌ಗೆ ಶಿವಕುಮಾರ್ ತಿರುಗೇಟು..ಅಬ್ಬಬ್ಬಾ..!

‘ಬಂಡೆಯಂತೆ ಸರ್ಕಾರದ ಜತೆಗಿದ್ದು ಯಾವುದೇ ಕಾರಣಕ್ಕೂ ಸರ್ಕಾರ ಬೀಳದಂತೆ ನೋಡಿಕೊಳ್ಳುತ್ತೇನೆ’ ಎಂದು ಅವರ ಜತೆಯಲ್ಲಿಯೇ ಇದ್ದುಕೊಂಡು 13 ತಿಂಗಳ ಕಾಲ ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ತಿಂಗಳಿಗೊಂದು ಗುಂಡಿ ತೋಡಿದರು. ಸಮ್ಮಿಶ್ರ ಸರ್ಕಾರದಲ್ಲಿ 13 ತಿಂಗಳು 13 ಗುಂಡಿ ತೋಡಿ ಸರ್ಕಾರ ಉರುಳಿಸುವ ಮೂಲಕ ರಾಜಕೀಯ ಷಡ್ಯಂತ್ರ ಮಾಡಿದರು’ ಎಂದು ವಾಗ್ದಾಳಿ ನಡೆಸಿದ್ದಾರೆ. 

Related Video