ಬಿಜೆಪಿ ಸೇರಿದ ರೌಡಿ ಶೀಟರ್ ಪರ ಸಿ.ಟಿ. ರವಿ ಬ್ಯಾಟಿಂಗ್; ರೌಡಿಗಳಿಗೆ ಕ್ಲೀನ್ ಸರ್ಟಿಫಿಕೇಟ್!
ಕೆಲವು ಪಕ್ಷದವರು ತಮ್ಮ ವಿರುದ್ಧ ಕೆಲಸ ಮಾಡಿದ್ದಕ್ಕಾಗಿ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್ ಪಟ್ಟಿ ತೆರೆಯುತ್ತಾರೆ. ನನ್ನ ಮೇಲೂ 1990ರಲ್ಲಿ ಕಾಂಗ್ರೆಸ್ ರೌಡಿಶೀಟರ್ ಪಟ್ಟಿ ತೆರೆದಿತ್ತು.
ಬೆಂಗಳೂರು (ಡಿ.3): ಬಿಜೆಪಿ ಸೇರ್ಪಡೆಗೊಂಡ ರೌಡಿಗಳ ಪರ ಸಿ.ಟಿ. ರವಿ ಬ್ಯಾಟಿಂಗ್ ಮಾಡಿದ್ದಾರೆ. ರೌಡಿ ಶೀಟರ್‍ಗಳಿಗೆ ಸಾಫ್ಟ್ ಕಾರ್ನರ್ ತೋರಿಸುವ ಮೂಲಕ ಕ್ಲೀನ್ ಸರ್ಟಿಫಿಕೇಟ್ ನೀಡುತ್ತಿದ್ದಾರೆ. ರಾಜಕೀಯ ಕಾರಣಕ್ಕೆ 1990ರಲ್ಲಿ ಕಾಂಗ್ರೆಸ್ ನಾಯಕರು ರೌಡಿಶೀಟರ್‍ಗೆ ಸೇರ್ಪಡೆ ಮಾಡಿದ್ದರು. ನಾನು ಯಾರ ಮೇಲೂ ಈವರೆಗೆ ಗೂಂಡಾಗಿರಿ ಮಾಡಿಲ್ಲ. ದಿನಕ್ಕೊಂದು ಮನಸ್ಥಿತಿಯನ್ನು ಬದಲಾಯಿಸುವ ಕಾಂಗ್ರೆಸ್ ನವರು ರಾವಣನ ಮನಸ್ಥಿತಿಯರವು. ಆದರೆ, ಪ್ರಧಾನನಂತ್ರಿ ಮೋದಿ ಅವರನ್ನು ರಾವಣ ಎಂದು ಕರೆಯುತ್ತಿದ್ದಾರೆ. ಆದರೆ, ಜನರ ಹೃದಯ ಸಾಮ್ರಾಟ ಆಗಿರುವಂತಹ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣ ಮಾಡುತ್ತಿದ್ದಾರೆ. ರಾಮ ಭಕ್ತರು ರಾವಣ ಮನಸ್ಥಿತಿ ಹೊಂದಲು ಸಾಧ್ಯವಿಲ್ಲ. ಶ್ರೀರಾಮನನ್ನು ಕಾಲ್ಪನಿಕ ಸನ್ನಿವೇಶ ಎಂದವರು, ಗೋದ್ರಾ ಹತ್ಯಾಕಾಂಡ ಮಾಡಿದವರು ರಾವಣ ಸಂಸ್ಕೃತಿ ಅವರಾಗಿದ್ದಾರೆ. ಈಗಿನ ಗುಜರಾತ್ ಚುನಾವಣೆ, ನಂತರದ ನಮ್ಮ ರಾಜ್ಯದ ಚುನಾವಣೆ ಹಾಗೂ ೨೦೨೪ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಳಿದುಳಿದ ಪಳೆಯುಳಿಕೆಗಳು ಕೂಡ ನಾಶವಾಗಲಿವೆ.