ವಿಜಯೇಂದ್ರ ಕೇವಲ ಯಡಿಯೂರಪ್ಪ ಬಣಕ್ಕೆ ಮಾತ್ರ ಅಧ್ಯಕ್ಷರು, ಕಾಂಗ್ರೆಸ್ ಟಾಂಗ್!
ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ, ಕಾರ್ಯಕರ್ತರಲ್ಲಿ ಸಂಭ್ರಮ, ಹಿರಿಯರ ಅಸಮಾಧಾನ, ವಿಜಯೇಂದ್ರ ಪಟ್ಟಾಭಿಷೇಕಕ್ಕೆ ಹಲವರು ಗೈರು, ಬಿಜೆಪಿ ಟೀಕಿಸಿದ ಕಾಂಗ್ರೆಸ್ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಬಿವೈ ವಿಜಯೇಂದ್ರಗೆ ಇಂದು ಅಧಿಕೃತವಾಗಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ನೀಡಿ ಅಧಿಕಾರ ಹಸ್ತಾಂತರಿಸಲಾಗಿದೆ. ಬಿಜೆಪಿ ಕಚೇರಿಯಲ್ಲಿ ವಿಜಯೇಂದ್ರ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಗಿತ್ತು. ಅಧಿಕಾರ ಸ್ವೀಕರಿಸಿದ ವಿಜಯೇಂದ್ರ ಮಹತ್ವದ ಸಂದೇಶ ಸಾರಿಸಿದ್ದಾರೆ.ಆದರೆ ಕೆಲ ಹಿರಿಯರು ಮುನಿಸಿಕೊಂಡಿದ್ದಾರೆ. ಇಂದಿನ ಕಾರ್ಯಕ್ರಮಕ್ಕೂ ಗೈರಾಗಿದ್ದಾರೆ. ಈ ಪೈಕಿ ವಿ ಸೋಮಣ್ಣ, ಯತ್ನಾಳ್, ಎಸ್‌ಟಿ ಸೋಮಶೇಖರ್ ಸೇರಿದಂತೆ ಕೆಲ ನಾಯಕರು ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಇದೇ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಟೀಕಿಸಿದೆ. ಬಿಜೆಪಿಯಲ್ಲಿ ಭಿನ್ನಮತ, ಅಸಮಾಧಾನ ಹೆಚ್ಚಾಗಿದೆ. ವಿಜಯೇಂದ್ರ ಕೇವಲ ಯಡಿಯೂರಪ್ಪ ಬಣಕ್ಕೆ ಮಾತ್ರ ಅಧ್ಯಕ್ಷರು ಎಂದು ಟಾಂಗ್ ನೀಡಿದೆ.