Congress First List: ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ, ಅಲ್ಪಸಂಖ್ಯಾತರಿಗೆ ಮಣೆ ಹಾಕಿದ 'ಕೈ'

 ಅಲ್ಪಸಂಖ್ಯಾತರಿಗೆ  ಕಾಂಗ್ರೆಸ್‌ ಮಣೆ ಹಾಕಿದ್ದು ,ಮೊದಲ ಪಟ್ಟಿಯಲ್ಲಿ 8 ಮಂದಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿದೆ.

First Published Mar 25, 2023, 10:23 AM IST | Last Updated Mar 25, 2023, 10:23 AM IST

ಕರ್ನಾಟಕ ವಿಧಾನಸಭೆ ಚುನಾವಣೆ 2023ರಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಇಂದು ಶನಿವಾರ ಬೆಳಗ್ಗೆ ಬಿಡುಗಡೆಯಾಗಿದೆ. ಕಳೆದ 3 - 4 ದಿನಗಳಿಂದ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದ್ದು, ಈವರೆಗೆ ಪಟ್ಟಿ ಬಿಡುಗಡೆಯಾಗಿರಲಿಲ್ಲ. ಆದರೆ, ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸುವ ದಿನವೇ ಕಾಂಗ್ರೆಸ್‌ 124 ವಿಧಾನಸಭಾ ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಇನ್ನು ಅಲ್ಪಸಂಖ್ಯಾತರಿಗೆ  ಕಾಂಗ್ರೆಸ್‌ ಮಣೆ ಹಾಕಿದ್ದು ,ಮೊದಲ ಪಟ್ಟಿಯಲ್ಲಿ 8 ಮಂದಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿದೆ. ಜಮೀರ್‌ ಅಹ್ಮದ್‌,ಕನಿಜ್‌ ಫಾತಿಮಾ, ರಹೀಂ ಖಾನ್‌, ರಿಜ್ವಾನ್‌ ಅರ್ಷದ್‌, ತನ್ವೀರ್‌ ಸೇಠ್‌ , ಖಾದರ್‌ ಗೆ  ಟಿಕೆಟ್ ಘೋಷಣೆ ಮಾಡಿದೆ.