ಗಾಂಧಿ ಹೆಸ್ರಿನಲ್ಲಿ ತಲೆಮಾರಿಗೆ ಆಗುವಷ್ಟು ಮಾಡ್ಕೊಂಡಿದ್ದೇವೆ, ಕಾಂಗ್ರೆಸ್ ನಾಯಕನ ಋಣಸಂದಾಯದ ಮಾತು!
ಸೋನಿಯಾ ಗಾಂಧಿ ಇಡಿ ಪ್ರತಿಭಟನೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾತನಾಡಿದ ನಾಯಕ ರಮೇಶ್ ಕುಮಾರ್ ಭಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದು ರಮೇಶ್ ಕುಮಾರ್ ಹೇಳಿಕೆಯಿಂದ ಕಾಂಗ್ರೆಸ್ ಆಡಳಿತದ ಹೆಸರಿನಲ್ಲಿ ಅಸಲಿಗೆ ಮಾಡಿದ್ದೇನು? ಅನ್ನೋ ಪ್ರಶ್ನೆ ಎದುರಾಗಿದೆ.
ಗಾಂಧಿ ಹೆಸರಿನಲ್ಲಿ ಮೂರು ನಾಲ್ಕು ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ. ಇದೀಗ ಸೋನಿಯಾ ಗಾಂಧಿಗೆ ನಾವು ಶಕ್ತಿ ತುಂಬಬೇಕು. ನಾವು ಪ್ರತಿಭಟನೆ ಮೂಲಕ ಅವರಿಗೆ ಕೊಂಚ ಸಮಾಧಾನ ತರಬೇಕು. ಇದು ಋಣಸಂದಾಯ. ಇಷ್ಟು ಮಾಡದಿದ್ದರೆ ನಾವು ತಿನ್ನುವ ಅನ್ನದಲ್ಲಿ ಹುಳ ಬೀಳುತ್ತದೆ ಎಂದು ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಹೇಳಿದ್ದಾರೆ. ಸೋನಿಯಾ ಗಾಂಧಿ ಇಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಆಯೋಜಿಸಿದ ಪ್ರತಿಭಟನೆಯಲ್ಲಿ ರಮೇಶ್ ಕುಮಾರ್ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ .