ಸಿದ್ದರಾಮಯ್ಯ ಕೋಳಿ ಸಾರು ತಿಂದಿಲ್ಲ: ಊಟ ಬಡಿಸಿದವರೇ ಕೊಟ್ರು ಸ್ಪಷ್ಟನೆ

ಸಿದ್ದರಾಮಯ್ಯನವರು ಮಾಂಸ ಊಟ ಮಾಡಿದ್ದಾರೋ? ಇಲ್ಲವೋ? ಎನ್ನುವ ಸ್ವತಃ ಊಟದ ವ್ಯವಸ್ಥೆ ಮಾಡಿಸಿದ್ದ ಕಾಂಗ್ರೆಸ್ ನಾಯಕಿ ವೀಣಾ ಅಚ್ಚಯ್ಯ ಸ್ಪಷ್ಟನೆ ಕೊಟ್ಟಿದ್ದಾರೆ.

First Published Aug 21, 2022, 7:16 PM IST | Last Updated Aug 21, 2022, 7:15 PM IST

ಮಡಿಕೇರಿ, (ಆಗಸ್ಟ್.21): ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೊಡಗು ಪ್ರವಾಸದ ವೇಳೆ ಮಾಂಸ ಊಟ ಮಾಡಿ ದೇವಸ್ಥಾನಕ್ಕೆ ಹೋಗಿದ್ದಾರೆ ಎನ್ನುವ ಆರೋಪವನ್ನು ಬಿಜೆಪಿ ಮಾಡಿದೆ.

ಮಧ್ಯಾಹ್ನ ನಾನ್‌ವೆಜ್‌ ತಿಂದು ಸಂಜೆ ದೇವಸ್ಥಾನಕ್ಕೆ ಹೋದ್ರೆ ತಪ್ಪೇನು?

ಇದನ್ನು ಕಾಂಗ್ರೆಸ್ ನಾಯಕರು ಅಲ್ಲೆಗೆಳೆದಿದ್ದಾರೆ. ಈ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಇನ್ನು ಸಿದ್ದರಾಮಯ್ಯನವರು ಮಾಂಸ ಊಟ ಮಾಡಿದ್ದಾರೋ? ಇಲ್ಲವೋ? ಎನ್ನುವ ಸ್ವತಃ ಊಟದ ವ್ಯವಸ್ಥೆ ಮಾಡಿಸಿದ್ದ ಕಾಂಗ್ರೆಸ್ ನಾಯಕಿ ವೀಣಾ ಅಚ್ಚಯ್ಯ ಸ್ಪಷ್ಟನೆ ಕೊಟ್ಟಿದ್ದಾರೆ.