3ನೇ ಪಟ್ಟಿ ಬಿಡುಗಡೆಗೆ ಕಾಂಗ್ರೆಸ್‌ ಕಸರತ್ತು: ಬಿಜೆಪಿ ಲಿಸ್ಟ್‌ ರಿಲೀಸ್‌ ಬಳಿಕವೇ ಫೈನಲ್..!

3 ನೇ ಪಟ್ಟಿ ಬಿಡುಗಡೆಗೆ ಕಾಂಗ್ರೆಸ್‌ ಕಸರತ್ತು ನಡೆಸುತ್ತಿದ್ದು, ಬಿಜೆಪಿ ಪಟ್ಟಿ ಬಿಡುಗಡೆಗೆ ರಾಜ್ಯ ಕಾಂಗ್ರೆಸ್‌ ಎದುರು ನೋಡುತ್ತಿದೆ.

First Published Apr 11, 2023, 11:52 AM IST | Last Updated Apr 11, 2023, 11:52 AM IST

ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು 29 ದಿನಗಳು ಮಾತ್ರ ಬಾಕಿ ಉಳಿದಿದ್ದು, ಈ ಪೈಕಿ ಕಾಂಗ್ರೆಸ್‌ ಈಗಾಗಲೇ 2 ಹಂತಗಳ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದೆ. ಸದ್ಯ, 3 ನೇ ಪಟ್ಟಿ ಬಿಡುಗಡೆಗೆ ಕಾಂಗ್ರೆಸ್‌ ಕಸರತ್ತು ನಡೆಸುತ್ತಿದ್ದು, ಬಿಜೆಪಿ ಪಟ್ಟಿ ಬಿಡುಗಡೆಗೆ ರಾಜ್ಯ ಕಾಂಗ್ರೆಸ್‌ ಎದುರು ನೋಡುತ್ತಿದೆ. ಇನ್ನು, ಸೋಮವಾರ ತಡರಾತ್ರಿವರೆಗೆ ಕಾಂಗ್ರೆಸ್‌ ಹೈವೋಲ್ಟೇಜ್‌ ಸಭೆ ನಡೆದಿದೆ ಎಂದು ತಿಳಿದುಬಂದಿದೆ. ಬಿಜೆಪಿ ಮೊದಲ ಟಿಕೆಟ್‌ ಪಟ್ಟಿ ರಿಲೀಸ್‌ ಬಳಿಕವೇ ಕಾಂಗ್ರೆಸ್‌ 3ನೇ ಲಿಸ್ಟ್‌ ಬಿಡುಗಡೆ ಮಾಡಲಿದೆ.