News Hour: ಹೊರಗೆ ಸಿದ್ದರಾಮಯ್ಯಗೆ ಬೆಂಬಲ, ಒಳಗೊಳಗೆ CM ಕುರ್ಚಿಗೆ ಹಂಬಲ

ಕಾಂಗ್ರೆಸ್‌ ಪಾಳಯದಲ್ಲಿ ಸಿಎಂ ಕುರ್ಚಿ ಕಾಳಗ ಜೋರಾಗಿದೆ. ಹೊರಗೆ ಸಿದ್ದರಾಮಯ್ಯಗೆ ಬೆಂಬಲ ನೀಡುತ್ತಿದ್ದರೆ, ಒಳಗೊಳಗೆ ಸಿಎಂ ಕುರ್ಚಿಯ ಹಂಬಲಕ್ಕೆ ಬಿದ್ದಿರುವುದು ಕಾಣಿಸಿದೆ.


 

First Published Sep 9, 2024, 11:11 PM IST | Last Updated Sep 9, 2024, 11:11 PM IST

ಬೆಂಗಳೂರು (ಸೆ.9): ಕಾಂಗ್ರೆಸ್​ ಪಾಳಯದಲ್ಲಿ ಸಿಎಂ ಕುರ್ಚಿ ಕಾಳಗ ಮತ್ತಷ್ಟು ಜೋರಾಗಿದೆ. ಹೊರಗೆ ಸಿದ್ದರಾಮಯ್ಯಗೆ ಬೆಂಬಲ ನೀಡುತ್ತಿರುವವರೆ ಒಳಗೊಳಗೆ CM ಕುರ್ಚಿ ಹಂಬಲ ವ್ಯಕ್ತಪಡಿಸಿದ್ದಾರೆ. ರಾಜ್ಯ ಕಾಂಗ್ರೆಸ್​ನಲ್ಲಿ ಹಿರಿಯ ನಾಯಕರಿಗೆ ಅಧಿಕಾರದ ಕನಸು ಇನ್ನೂ ನಿಲ್ಲುತ್ತಿಲ್ಲ.

ಸಿಎಂಗೆ ಕಾನೂನು ಹಿನ್ನಡೆಯಾದ್ರೆ ಈಗಿನಿಂದಲೇ ನಾಯಕರ ರಣತಂತ್ರ ರಚನೆ ಆಗುತ್ತಿದೆ. ಸಿಎಂ ಕುರ್ಚಿ ಇಲ್ಲ ಎಂದು ಮಾಧ್ಯಮಗಳ ಎದುರು ಹೇಳಿದ್ರೂ, ಸಿಎಂ ಕುರ್ಚಿಗಾಗಿ ಸರ್ಕಸ್ ಮಾತ್ರ ನಿಲ್ಲುತ್ತಿಲ್ಲ ದೇಶಪಾಂಡೆ.. ಎಂಬಿ ಪಾಟೀಲ್​, ದರ್ಶನಾಪುರ, ರಾಯರೆಡ್ಡಿ ಸೇರಿದಂತೆ ಹಲವರು ಸಿಎಂ ಆಸೆ ವ್ಯಕ್ತಪಡಿಸಿದ್ದಾರೆ.

ಹೆಜ್ಜೆ ಹೆಜ್ಜೆಯಲ್ಲೂ ಸಿಕ್ಕಿಬಿದ್ದ 'ಗಜ'ಪತಿ, ಗರ್ವಭಂಗಕ್ಕೆ ಸಾಕಾ ಇಷ್ಟು ಚಿತ್ರಗಳು!

ಸಿಎಂ ಬದಲಾವಣೆ ಪ್ರಸ್ತಾವನೆ ಹೈಕಮಾಂಡ್ ಎದುರು ಇಲ್ಲ. ಪ್ರಸ್ತಾವನೆ ಇದ್ದಿದ್ರೆ ಸ್ವಲ್ಪ ನಮಗೂ ಗೊತ್ತಾಗುತ್ತಿತ್ತಲ್ವಾ.. ? ಎಂ.ಬಿ ಪಾಟೀಲ್ ಹೇಳಿದ್ದೇ ಬೇರೆ, ಮಾಧ್ಯಮ ಅರ್ಥೈಸಿಕೊಂಡಿದ್ದೇ ಬೇರೆ. ಸಿಎಂ ಬದಲಾವಣೆ ಚರ್ಚೆ ಕೇವಲ ಮಾಧ್ಯಮಗಳಿಗಷ್ಟೇ ಸೀಮಿತ ಎಂದು ಸಚಿವ ಪ್ರಿಯಾಂಗ್‌ ಖರ್ಗೆ ಹೇಳಿದ್ದಾರೆ.