ಕಾಂಗ್ರೆಸ್ ಅಂತರ್ಯುದ್ಧ: ಡಿ.ಕೆ.ಶಿವಕುಮಾರ್ ದಾಳಿಗೆ ಪರಮೇಶ್ವರ್ ಚೆಕ್‌ಮೇಟ್?
ಡಿ.ಕೆ.ಶಿವಕುಮಾರ್ ಅವರು ಪರಮೇಶ್ವರ್ ಅವರ ಡಿನ್ನರ್ ಮೀಟಿಂಗ್ ಯೋಜನೆಯನ್ನು ತಡೆದಿದ್ದಾರೆ. ಕಾಂಗ್ರೆಸ್‌ನಲ್ಲಿ ಹೊಸ ಬಣ ರಾಜಕೀಯ ಆರಂಭವಾಗಿದ್ದು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬಣಗಳ ನಡುವೆ ಅಂತರ್ಯುದ್ಧ ಮುಂದುವರೆದಿದೆ..
ಕಾಂಗ್ರೆಸ್ ಅಂತರ್ಯುದ್ಧದ ಚಾಪ್ಟರ್ 2ನಲ್ಲಿ ಪರಂ ಪಟ್ಟಿನ ರಣರೋಚಕ ಸ್ಟೋರಿ ನಡೆಯುತ್ತಾ ಇದ್ದಾಗಲೇ ಆ ಕಥೆಗೆ ಅಂತ್ಯ ಹಾಡಿಸಿದ್ದಾರೆ ಡಿ.ಕೆ.ಶಿವಕುಮಾರ್. ಇಂದ್ರಪ್ರಸ್ಥದಲ್ಲಿ ಕೂತು ಡಿ.ಕೆ.ಶಿವಕುಮಾರ್ ಬಿಟ್ಟ ದಾಳಕ್ಕೆ ರಾಜ್ಯ ಕಾಂಗ್ರೆಸ್ನಲ್ಲಿ ಬಿರುಗಾಳಿಯೇ ಎದ್ದಿದೆ. ಡಿಕೆಯನ್ನೇ ಚೆಕ್ಮೆಟ್ ಮಾಡೋಕೆ ಹೊರಟಿದ್ದ ಪರಮೇಶ್ವರ್ ಅವರೇ ಚೆಕ್ಮೆಟ್ ಆಗಿದ್ದಾರೆ. ಅಷ್ಟಕ್ಕೂ ಡಿಕೆ ಕೊಟ್ಟ ಆ ಕೌಂಟರ್ ಏನು..? ಪರಮೇಶ್ವರ್ ಮಾಡೋಕೆ ಹೊರಟಿದ್ದ ಆ ಡಿನ್ನರ್ ಮೀಟಿಂಗ್ ಕಥೆ ಇಲ್ಲಿಗೇ ಮುಗಿತಾ ಅನ್ನೋದನ್ನ ತೋರಿಸ್ತೀವಿ.
ಸತೀಶ್ ಜಾರಕಹೊಳಿ ಬೆನ್ನಲ್ಲೆ ಡಿನ್ನರ್ ಮೀಟಿಂಗ್ ಮಾಡೋಕೆ ಹೊರಟಿದ್ರು. ಡಾ.ಜಿ. ಪರಮೇಶ್ವರ್..ತಮ್ಮ ಕಡೆಯಿಂದಲೂ ಡಿನ್ನರ್ ದಂಗಲ್ ಶುರುಮಾಡಿ ಹಲವು ಉದ್ದೇಶ ಈಡೇರಿಸಿಕೊಳ್ಳುವ ಗುರಿ ಅವರಿಗಿತ್ತು. ಪವರ್ ಪ್ರದರ್ಶನದ ಜೊತೆಗೆ ಹಲವು ಪಟ್ಟುಗಳನ್ನ ಹಾಕೋ ಗುರಿಯೂ ಅವರಿಗಿತ್ತು. ಆದ್ರೆ, ದೆಹಲಿಯಲ್ಲಿ ಕೂತೇ ಪರಮೇಶ್ವರ್ಗೆ ಡಿಕೆ ಕಡೆಯಿಂದ ಕೌಂಟರ್ ಬಂದಿದೆ. ಅದು ಅಂತಿತ್ತ ಕೌಂಟರ್ ಅಲ್ಲ. ವಿದೇಶದಿಂದ ರಾಜ್ಯಕ್ಕೆ ಬರದೇ ದೆಹಲಿಗೆ ಹೋದ ಡಿ.ಕೆ.ಶಿವಕುಮಾರ್ ಅಲ್ಲಿಂದಲೇ ತಮ್ಮ ಚದುರಂಗದಾಟ ಆಡಿದ್ದಾರೆ. ಪರಮೇಶ್ವರ್ಗೆ ಚೆಕ್ಮೆಟ್ ಎಂದಿದ್ದಾರೆ.
ಇಷ್ಟೆಲ್ಲಾ ನಡೆಯುತ್ತಾ ಇರೋದು ಯಾಕೆ..? ಯಾರಿಂದ ಇವೆಲ್ಲಾ ಅಂತ ನೋಡಿದ್ರೆ, ಕಾಂಗ್ರೆಸ್ನಲ್ಲಿ ಎರಡು ಬಣಗಳು ಕಾಣಿಸುತ್ವೆ. ಒಂದು ಸಿದ್ದರಾಮಯ್ಯ ಅವರ ಬಣ. ಇನ್ನೊಂದು ಡಿ.ಕೆ.ಶಿವಕುಮಾರ್ ಅವರ ಬಣ. ಆದ್ರೆ ಕಾಂಗ್ರೆಸ್ನ ಈ ಬಣರಾಜಕೀಯ ಮತ್ತೊಂದು ರೂಪವನ್ನ ಪಡೆದುಕೊಂಡಿದೆ. ಸೂಕ್ಷ್ಮವಾಗಿ ಗಮನಿಸಿದ್ರೆ ಆ ಸ್ವರೂಪ ಕಾಣಿಸುತ್ತೆ. ಹಾಗಿದ್ರೆ ಕೈ ಸಾಮ್ರಾಜ್ಯದಲ್ಲಿ ಸೃಷ್ಟಿಯಾಗಿರುವ ಮತ್ತೊಂದು ರೂಪದ ಆ ಬಣರಾಜಕೀಯ ಏನು ಅನ್ನೋದನ್ನ ತೋರಿಸ್ತೀವಿ. ಆದ್ರೆ, ಅದಕ್ಕೂ ಮುನ್ನ ಮತ್ತೊಂದು ಸ್ಮಾಲ್ ಬ್ರೇಕ್.
ಇದನ್ನೂ ಓದಿ: ಮಂತ್ರಿಗಳಿಂದ ಸರಣಿ ಔತಣ: ಕಾಂಗ್ರೆಸ್ ಬಣ ರಾಜಕಾರಣ ಉಲ್ಬಣ!
ಹೊಸ ವರ್ಷ ಆರಂಭವಾಗ್ತಾ ಇದ್ಹಾಗೆ ಕಾಂಗ್ರೆಸ್ನಲ್ಲಿ ಶುರುವಾಗಿರುವ ಅಂತರ್ಯುದ್ಧ ದಿನಗಳು ಉರುಳಿದಂತೆ ತೀವ್ರತೆಯನ್ನ ಪಡೆದುಕೊಳ್ತಿದೆ. ಇತ್ತ ರಾಜ್ಯದಲ್ಲಿ ಸಿದ್ದರಾಮಯ್ಯ ಪಡೆ ಒಂದೊಂದೇ ಪಟ್ಟುಗಳನ್ನ ಹಾಕ್ತಾ ಇದ್ರೆ, ಅತ್ತ ದೆಹಲಿಯಲ್ಲಿ ಕೂತೇ ತಮ್ಮ ರಣತಂತ್ರ ರೂಪಿಸ್ತಾ ಇದ್ದಾರೆ ಡಿ.ಕೆ.ಶಿವಕುಮಾರ್. ಈ ಎಲ್ಲದರ ಮಧ್ಯೆ ಕಾಂಗ್ರೆಸ್ನ ಈ ಅಂತರ್ಯುದ್ಧ ಮತ್ತೊಂದು ರೂಪವನ್ನ ಪಡೆದುಕೊಂಡಿದೆ ಎನ್ನಲಾಗ್ತಿದೆ.
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮೇಲೆಯೇ ಸಂಪೂರ್ಣ ನಂಬಿಕೆ ಇಡ್ಕೊಂಡು ಕೈ ಕೋಟೆಯೊಳಗೆ ಶುರುವಾಗಿರುವ ಅಂತರ್ಯುದ್ಧದಲ್ಲಿ ಅಣ್ತಮ್ಮ ಹೋರಾಡ್ತಾ ಇದ್ದಾರೆ . ಡಿ.ಕೆ.ಶಿವಕುಮಾರ್ ಅವರ ಹಿಂದೆ ಬಲವಾಗಿ ಡಿ.ಕೆ.ಸುರೇಶ್ ನಿಂತಿದ್ದಾರೆ. ಇದಿಷ್ಟು ಕಾಂಗ್ರೆಸ್ ಅಂತರ್ಯುದ್ಧದ ಚಾಪ್ಟರ್ 1. ಇದ್ರ ಇನ್ನೊಂದು ಚಾಪ್ಟರ್ನಲ್ಲಿ ನಡೆಯುತ್ತಾ ಇರೋ ಒಳಸಮರ ಮತ್ತಷ್ಟು ರಣರೋಚಕವಾಗಿದೆ.