ಕಾಂಗ್ರೆಸ್ ಉಚಿತ ಗ್ಯಾರೆಂಟಿ ತಲೆನೋವು, ಗೃಹ ಲಕ್ಷ್ಮೀ ಯೋಜನೆ ಅತ್ತೆಗಾ? ಸೊಸೆಗಾ?
ಗ್ಯಾರೆಂಟಿ ಜಾರಿಗೆ 33 ಸಚಿವರೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ,ಚುನಾವಣೆ ಸ್ಪಿರಿಟ್‌ನಲ್ಲಿ ಹೇಳಿದ್ದಾರೆ, ಎಲ್ಲರಿಗೂ ಗ್ಯಾರೆಂಟಿ ಇಲ್ಲ ಎಂದ ಶಾಸಕ,ಸವದಿ, ಶೆಟ್ಟರ್ ಸಮಾಧಾನ ಪಡಿಸಿದ ಡಿಕೆ ಶಿವಕುಮಾರ್ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಕಾಂಗ್ರೆಸ್ 5 ಗ್ಯಾರೆಂಟಿ ಯೋಜನೆ ಜಾರಿ ಮಾಡಲು ಇಂದು ಎಲ್ಲಾ 33 ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ಎರಡೂವರೆ ಗಂಟೆ ಕಾಲ ಸಭೆ ನಡೆಸಿದ್ದಾರೆ. ಶುಕ್ರವಾರ ಕ್ಯಾಬಿನೆಟ್ ಸಭೆ ಬಳಿಕ 3 ಗ್ಯಾರೆಂಟಿ ಯೋಜನೆ ಜಾರಿಯಾಗುವ ಸಾಧ್ಯತೆ ಇದೆ. ಆದರೆ ಕೆಲ ಕಂಡೀಷನ್ ಕೂಡ ಅನ್ವಯವಾಗಲಿದೆ.ಇದರ ನಡುವೆ ಕಾಂಗ್ರೆಸ್ ಉಚಿತ ಗ್ಯಾರೆಂಟಿ ಯೋಜನೆ ಇದೀಗ ಕುಟುಂಬವನ್ನು ಒಡೆಯುತ್ತದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗೃಹ ಲಕ್ಷ್ಮಿ ಯೋಜನೆ ಅತ್ತೆಗಾ ಅಥವಾ ಸೊಸೆಗಾ? ಇಬ್ಬರಿಗೂ ನೀಡಬೇಕು. ಇಲ್ಲದಿದ್ದರೆ ಕುಟುಂಬದಲ್ಲಿ ಕಲಹ ಶುರುವಾಗಲಿದೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.