ಇಂದಿರಾ ಮೊಮ್ಮಗಳ ರಣಾರ್ಭಟಕ್ಕೆ ಮೊಳಗಿದ ರಣಕಹಳೆ! ರಾಜಕೀಯ ಸಮರದಲ್ಲಿ ಸಂಸದೆ ಪ್ರಿಯಾಂಕಾರದ್ದೇ ಹವಾ!

ಕೈ ನಾಯಕರಿಗೆ ಇಂದಿರೆ ಮೊಮ್ಮಗಳೇ ಅಚ್ಚುಮೆಚ್ಚು! ಪ್ರಿಯಾಂಕಾ ಪಟ್ಟು. ಈಕೆ ಅಜ್ಜಿಯ ಪಡಿಯಚ್ಚು! ಸಂಸದೆ ಪಟ್ಟ. ಆರಂಭವಾಗಿದೆ ಅಸಲಿ ಆಟ! ಅಖಾಡದಲ್ಲಿ ಅಣ್ಣನನ್ನೇ ಮೀರಿಸ್ತಾಳಾ ಮುದ್ದಿನ ತಂಗಿ?

First Published Dec 9, 2024, 4:01 PM IST | Last Updated Dec 9, 2024, 4:01 PM IST

ಇಂದಿರಾ ಈಸ್ ಬ್ಯಾಕ್. ಪ್ರಿಯಾಂಕಾ ಗಾಂಧಿ ಕಂಡು ಕೈ ಕಾರ್ಯಕರ್ತರು ಹೇಳ್ತಿರೋ ಮಾತಿದು.  ಸಂಸದೆಯಾಗ್ತಾ ಇದ್ದಂಗೆ ರಾಜಕೀಯ ಸಮರದಲ್ಲಿ ಪ್ರಿಯಾಂಕಾರದ್ದೇ ಹವಾ. ಇಂದಿರಾ ಮೊಮ್ಮಗಳ ರಣಾರ್ಭಟಕ್ಕೆ ಮೊಳಗಿದೆ ರಣಕಹಳೆ. ಹೋರಾಟದ ಹಾದಿಗೆ ಧುಮುಕಿರುವ  ಮರಿ ಇಂದಿರಾ.

ಕೇಂದ್ರದ ವಿರುದ್ಧ ಕೆಂಡ ಕಾರುತ್ತಿರೋ ಪ್ರಿಯಾಂಕಾ ಗಾಂಧಿ. ಮೋದಿ ವಿರುದ್ಧ ವಾಗ್ದಾಳಿ. ಅಮಿತ್ ಶಾ ಜೊತೆಗೆ ಜಟಾಪಟಿ. ಯೋಗಿ ಸರ್ಕಾರದ ಮೇಲೆ ಹರಿಹಾಯ್ದ ಇಂದಿರೆ ಮೊಮ್ಮಗಳು. ಸಂಸದೆಯಾಗಿ ಆಯ್ಕೆಯಾಗ್ತಾ ಇದ್ಹಾಗೆ ರಾಷ್ಟ್ರ ರಾಜಕೀಯದಲ್ಲಿ ಪ್ರಿಯಾಂಕಾ ಹೇಗೆ ಸುನಾಮಿ ಎಬ್ಬಿಸ್ತಾ ಇದ್ದಾರೆ? ಇವರ ಸ್ಪೀಡ್ ಕೈ ಕಾರ್ಯಕರ್ತರಲ್ಲಿ ತಂದಿರುವಂತಹ ಜೋಶ್ ಎಂಥದ್ದು? ತೋರಿಸ್ತೀವಿ ನೋಡಿ.