
Party Rounds: ಇಂದು ರಾತ್ರಿಯೊಳಗೆ ಕಾಂಗ್ರೆಸ್ 3ನೇ ಪಟ್ಟಿ ಸಿದ್ಧ: ದಿಢೀರ್ ಗುಪ್ತ ಸಭೆ
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ನಾಲ್ವರು ಮುಖಂರೊಂದಿಗೆ ಗುಪ್ತ ಸಭೆ ಮಾಡುತ್ತಿರುವ ಕಾಂಗ್ರೆಸ್, ಇಂದು ರಾತ್ರಿಯೊಳಗೆ 3ನೇ ಪಟ್ಟಿಯಲ್ಲಿ 58 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುತ್ತದೆ.
ಬೆಂಗಳೂರು (ಏ.10): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ 224 ಕ್ಷೇತ್ರಗಳ ಪಟ್ಟಿ ಬಿಡುಗಡೆ ವಿಚಾರದಲ್ಲಿ ಕಾಂಗ್ರೆಸ್ ಭಾರೀ ಮುಂದಿದೆ. ಈವರೆಗೆ ಎರಡು ಹಂತದಲ್ಲಿ 166 ವಿಧಾನಸಭಾ ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಬಾಕಿ 58 ವಿಧಾನಸಭಾ ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡುವ ವಿಚಾರದಲ್ಲಿ ರಾಜ್ಯದ ಬಹುತೇಕ ನಾಯಕರನ್ನು ಹೊರಗಿಟ್ಟು ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಕೇವಲ 4 ನಾಯಕರನ್ನು ಒಳಗೊಂಡ ಪಟ್ಟಿಯನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ಸಂಸದೀಯ ಮಂಡಳಿ ಸಭೆಯನ್ನು ಏಕಾಏಕಿ ಕರೆದಿದ್ದು, ಈ ಬಗ್ಗೆ ರಾಜ್ಯದ ನಾಲ್ವರು ನಾಯಕರಿಗೆ ಕರೆ ಮಾಡಿ ಕೂಡಲೇ ಬರುವಂತೆ ಸೂಚನೆ ನೀಡಲಾಗಿದೆ. ಇನ್ನು ಶೃಂಗೇರಿ ಮತ್ತು ಧರ್ಮಸ್ಥಳ ಪ್ರವಾಸ ಮಾಡಬೇಕಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ದಿಢೀರನೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.