ಮುಡಾ ಕಂಟಕದಿಂದ ಪಾರಾಗಲು ಸ್ವಾಮೀಜಿಗಳ ಮೊರೆ ಹೋದ ಸಿಎಂ ಸಿದ್ದರಾಮಯ್ಯ!
ಸಿಂಹಾಸನದ ಸುತ್ತ ಸ್ವಾಮೀಜಿಗಳ ಕೋಟೆ ಕಟ್ಟಿ ನಿಂತಿರುವ ಸಿದ್ದರಾಮಯ್ಯ, ಮುಡಾ ಸಂಕಷ್ಟದ ಹೊತ್ತಲ್ಲಿ ಕಾವಿ ಮಂತ್ರತಂತ್ರ ಹೆಣೆದಿದ್ದಾರೆ. ರಾಜಕೀಯ ಇತಿಹಾಸದಲ್ಲಿ ಸ್ವಾಮೀಜಿಗಳ ಪಾತ್ರ ಮತ್ತು ಸಿದ್ದರಾಮಯ್ಯನವರ ಈ ನಡೆ ಏನನ್ನು ಸೂಚಿಸುತ್ತದೆ ಎಂಬುದನ್ನು ಪರಿಶೀಲಿಸಲಾಗಿದೆ.
ಮಠ-ಮಂದಿರಗಳಂದರೆ ಮಾರುದ್ದ ದೂರ ನಿಲ್ಲುವ ಸಿದ್ದರಾಮಯ್ಯನವರಿಂದ ಸಿಂಹಾಸನ ರಕ್ಷಣೆಗಾಗಿ ಸ್ವಾಮೀಜಿ ವ್ಯೂಹದ ಮೊರೆ ಹೋಗಿದ್ದಾರೆ. ಸಿದ್ದರಾಮಯ್ಯ ತಮ್ಮ ಸಿಂಹಾಸನದ ಸುತ್ತ 10 ಸ್ವಾಮೀಜಿಗಳು ಕೋಟೆ ಕಟ್ಟಿ ನಿಂತಿದ್ದಾರೆ. ಮುಡಾ ಸಂಕಷ್ಟದ ಹೊತ್ತಲ್ಲಿ ಮುಖ್ಯಮಂತ್ರಿಗಳಿಗೆ ಸ್ವಾಮೀಜಿಗಳ ದಶರಥ ಬಲ ಸಿಕ್ಕಿದೆ. ಇದಾದ ನಂತರ, ಸಿಎಂ ಸಿದ್ದರಾಮಯ್ಯ ಸತ್ಯಮೇವ ಜಯತೇ ಎಂದು ಹೇಳುತ್ತಾ, ಕುಟಿಲ ಕಾರಸ್ಥಾನದ ಕಥೆ ಹೇಳಿದ್ದಾರೆ. ಸಿಎಂ ಕುರ್ಚಿ ಅಲುಗಾಡುತ್ತಿರುವ ಹೊತ್ತಲ್ಲಿ ಸಿದ್ದರಾಮಯ್ಯ ಕಾವಿ ಮಂತ್ರತ ತಂತ್ರ ಹೆಣೆದಿದ್ದಾರೆ.
ಅವತ್ತು ಸದಾನಂದ ಗೌಡ ಮತ್ತು ಯಡಿಯೂರಪ್ಪ ಅವರೂ ಕಾವಿ ಮೊರೆ ಹೋಗಿದ್ದರು. ಈಗ ಸಿದ್ದರಾಮಯ್ಯ ಕೂಡ ತಮ್ಮ ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆ ಎಂದಾಗ ಕಾವಿ ಮೊರೆ ಹೋಗಿದ್ದಾರೆ. ಈ ಸ್ವಾಮೀಜಿಗಳು ರಾಜಕೀಯ ಅಖಾಡಕ್ಕಿಳಿಯೋದು ಹೊಸನೇತಲ್ಲ. ರಾಜ್ಯ ರಾಜಕಾರಣದಲ್ಲಿ ಇದಕ್ಕೆ ದೊಡ್ಡ ಇತಿಹಾಸವೇ ಇದೆ. ಚರಿತ್ರೆಯ ಪುಟದಿಂದ ಎದ್ದು ಬಂದ ಸನ್ಯಾಸಿ ರಾಜಕಾರಣದ ರೋಚಕ ಕತೆಗಳು ಇಲ್ಲಿವೆ ನೋಡಿ.
ರಾಜ್ಯದಲ್ಲಿ ಯಾವುದೇ ಸಮುದಾಯದ ವ್ಯಕ್ತಿ ಮುಖ್ಯಮಂತ್ರಿ ಆಗಲು, ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುವಾಗ ಕುರ್ಚಿ ಅಲುಗಾಡಿದಾಗ್ಲೆಲ್ಲಾ ಮುಖ್ಯಮಂತ್ರಿಗಳು ಸ್ವಾಮೀಜಿ ವ್ಯೂಹ ಹೆಣೆದು ಸಡ್ಡು ಹೊಡೆಯೋದು ರಾಜ್ಯ ರಾಜಕಾರಣದಲ್ಲಿ ಹೊಸತೇನಲ್ಲ. ರಾಜಕೀಯ ಶಕ್ತಿಪ್ರದರ್ಶನದಲ್ಲಿ ಸಿದ್ದರಾಮಯ್ಯ ಭರ್ಜರಿ ಪಟ್ಟುಗಳನ್ನು ಹಾಕುತ್ತಿದ್ದಾರೆ. ಆದರೆ, ಮುಡಾ ಪ್ರಕರಣವನ್ನು ರಾಜಕೀಯ ಅಸ್ತ್ರದಿಂದಲೇ ಗೆಲ್ಲಲು ಸಾಧ್ಯವಿಲ್ಲ. ಕಾರಣ, ಅದೀಗ ಕಾನೂನಿನ ಕಟ್ಟಳೆಯೊಳಗಿರೋ ಪ್ರಕರಣ. ಹೀಗಾಗಿ ಆಗಸ್ಟ್ 29ರ ಆ ನಿರ್ಣಾಯಕ ದಿನದ ಮೇಲೆ ಎಲ್ಲರ ಗಮನ ನೆಟ್ಟಿದೆ. ಸಿಂಹಾಸನವನ್ನು ಉಳಿಸಿಕೊಳ್ಳಲು ರಾಜಕೀಯವಾಗಿ ಏನೆಲ್ಲಾ ಪಟ್ಟುಗಳನ್ನು ಹಾಕಬೇಕೋ, ಯಾವೆಲ್ಲಾ ಅಸ್ತ್ರಗಳನ್ನು ಪ್ರಯೋಗಿಸಬೇಕೋ ಎಂಬ ಗೊಂದಲದಲ್ಲಿ ಸಿಎಂ ಸಿದ್ದರಾಮಯ್ಯ ಇದ್ದಾರೆ.