ಬಿಜೆಪಿ ವಿರುದ್ಧ ಕಾಂಗ್ರೆಸ್‌ ಅಸ್ಮಿತೆ ಉಳಿಸಲು ಪ್ರಾದೇಶಿಕ ಅಸ್ತ್ರ ಬಳಸಿದ ಸಿಎಂ ಸಿದ್ದರಾಮಯ್ಯ!

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ರಾಷ್ಟ್ರೀಯತೆಯೇ ಅಸ್ತ್ರವಾದ್ರೆ, ಸಿಎಂ ಸಿದ್ದರಾಮಯ್ಯ ಜಂತರ್ ಮಂತರ್'ನಲ್ಲಿ ಮೋದಿ ವಿರುದ್ಧ ಪ್ರಾದೇಶಿಕತೆಯ ಅಸ್ತ್ರ ಪ್ರಯೋಗಿಸಿದರು.

First Published Feb 8, 2024, 1:24 PM IST | Last Updated Feb 8, 2024, 1:24 PM IST

ಶಿವಮೊಗ್ಗ (ಫೆ.08): ಮೋದಿ ಸರ್ಕಾರದ ವಿರುದ್ಧ ದೆಹಲಿಯಲ್ಲಿ ನಡೆಯಿತು ಕಾಂಗ್ರೆಸ್ ಸರ್ಕಾರದ ಮಹಾ ದಂಡಯಾತ್ರೆ.. ಜಂತರ್ ಮಂತರ್'ನಲ್ಲಿ ಸಿಡಿಯಿತು ಪ್ರಾದೇಶಿಕತೆ ಅಸ್ಮಿತೆಯ ಅಸ್ತ್ರ.. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ರಾಷ್ಟ್ರೀಯತೆಯೇ ಅಸ್ತ್ರವಾದ್ರೆ, ಮೋದಿ ವಿರುದ್ಧ ಪ್ರಾದೇಶಿಕತೆಯ ಅಸ್ತ್ರ ಪ್ರಯೋಗಿಸಿದರು ಸಿಎಂ ಸಿದ್ದರಾಮಯ್ಯ. ಕನ್ನಡಿಗರ ಬೆವರಿನ ಹಣ ಉತ್ತರ ಪ್ರದೇಶಕ್ಕೆ ಹೋಗ್ತಿದೆ ಅಂತ ಸಿದ್ದು ಒತ್ತಿ ಒತ್ತಿ ಹೇಳಿದ್ದೇಕೆ..? ಲೋಕಸಭಾ ಚುನಾವಣೆಗೂ ಮೊದ್ಲು ಪ್ರಾದೇಶಿಕ ಅಸ್ಮಿತೆಯನ್ನು ಬಡಿದೆಬ್ಬಿಸುವ ಪ್ರಯತ್ನ ನಡೆಸಿದರೇಕೆ ಸಿದ್ದು.? ಲೆಕ್ಕರಾಮಯ್ಯನ ಅಸ್ಮಿತೆ ಅಸ್ತ್ರದ ಹಿಂದಿರೋ ರೋಚಕ ಲೆಕ್ಕಾಚಾರವೇನು ಇಲ್ಲಿದೆ ನೋಡಿ..

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಪ್ರಾದೇಶಿಕತೆಯ ಅಸ್ತ್ರವನ್ನ ಸಿದ್ದರಾಮಯ್ಯ ಝಳಪಿಸುತ್ತಿದ್ದಾರೆ. ರಾಷ್ಟ್ರೀಯತೆ Vs ಪ್ರಾದೇಶಿಕತೆಯ ಸಮರಕ್ಕೆ ಮುನ್ನುಡಿ ಬರೆದಿದ್ದಾರೆ. ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್'ಗೆ ಸಿಕ್ಕಿರೋದು ಅಂತಿಂಥಾ ಅಸ್ತ್ರವಲ್ಲ.. ಅದು ಅಸ್ಮಿತೆಯ ಅಸ್ತ್ರ, ಪ್ರಾದೇಶಿಕತೆಯ ಅಸ್ತ್ರ. ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಅಸ್ಮಿತೆಯ ರಣಕಹಳೆ ಮೊಳಗಿಸಿ ಬಿಟ್ಟಿದ್ದಾರೆ. ರಾಷ್ಟ್ರೀಯತೆ Vs ಪ್ರಾದೇಶಿಕತೆಯ ಸಮರಕ್ಕೆ ಮುನ್ನುಡಿ ಬರೆದಿದ್ದಾರೆ. ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ ಅಂತ ಲೋಕಸಭೆಯಲ್ಲೇ ಹೇಳಿದ್ದಾರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್. ಇದಕ್ಕೆ ಸಿದ್ದರಾಮಯ್ಯನವರು ಕೊಟ್ಟ ಉತ್ತರ ಹೇಗಿತ್ತು ನೋಡಿ. ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯವಾಗ್ತಿದೆ ಅನ್ನೋದು ಕಾಂಗ್ರೆಸ್ ಆರೋಪ. ಇದು ಹಸಿ ಹಸಿ ಸುಳ್ಳು ಅಂತ ಲೋಕಸಭೆಯಲ್ಲೇ ಹೇಳಿದ್ದಾರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್. ಇದಕ್ಕೆ ಜಂತರ್ ಮಂತರ್'ನಲ್ಲಿ ಸಿಎಂ ಸಿದ್ದರಾಮಯ್ಯನವರು ಬಿಜೆಪಿಯ ರಾಷ್ಟ್ರೀಯತೆಯ ವಿರುದ್ಧ ಪ್ರಾದೇಶಿಕತೆಯ ಅಸ್ಮಿತೆಯನ್ನು ಸಿದ್ದರಾಮಯ್ಯ ಬಡಿದೆಬ್ಬಿಸಿದ್ದಾರೆ. ಹಾಗಾದ್ರೆ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ರಾಷ್ಟ್ರೀಯತೆ ಗೆಲ್ಲುತ್ತಾ, ಪ್ರಾದೇಶಿಕತೆ ಗೆಲ್ಲುತ್ತಾ..? ಕಾದು ನೋಡೋಣ.