ಪ್ರಾಸಿಕ್ಯೂಷನ್ ಎದುರಿಸಲು 3 ರಣತಂತ್ರ ರೂಪಿಸಿದ ಸಿಎಂ ಸಿದ್ದರಾಮಯ್ಯ!

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ 10 ದಿನಗಳ ಬಿಗ್ ರಿಲೀಫ್ ಸಿಕ್ಕಿದ್ದು, ಆಗಸ್ಟ್ 29 ರಂದು ಹೈಕೋರ್ಟ್ ನೀಡುವ ತೀರ್ಪು ಅವರ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.

Share this Video
  • FB
  • Linkdin
  • Whatsapp

ಪ್ರಾಸಿಕ್ಯೂಷನ್ ಪಂಜರದಲ್ಲಿ ಸಿಲುಕಿರೋ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ 10 ದಿನಗಳ ಬಿಗ್ ರಿಲೀಫ್ ಸಿಕ್ಕಿದೆ. ಆದರೂ ಸಿಎಂ ತಲೆಯ ಮೇಲೆ ಕಾನೂನಿನ ತೂಗುಗತ್ತಿ ಬೀಸುತ್ತಿದೆ. ಬೀಸುವ ದೊಣ್ಣೆಯಿಂದ ಸದ್ಯಕ್ಕೆ ಸೇಫ್ ಆಗಿದ್ದರೂ ಇನ್ನೂ ಕ್ಲೈಮ್ಯಾಕ್ಸ್ ಬಾಕಿಯಿದೆ. ಆಗಸ್ಟ್ 29ರಂದು ಹೈಕೋರ್ಟ್ ನೀಡುವ ತೀರ್ಪಿನ ಆಧಾರದಲ್ಲಿ ಸಿದ್ದರಾಮಯ್ಯ ಸಿಂಹಾಸನ ಭವಿಷ್ಯ ಅಡಗಿದೆ. ಈ ಮಹಾಕಂಟಕದಿಂದ ಸಿಎಂ ಪಾರಾಗ್ತಾರಾ ಎನ್ನುವುದೇ ಇವತ್ತಿನ ಸುವರ್ಣ ಸ್ಪೆಷಲ್ ಆಗಿದೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಸದ್ಯಕ್ಕೆ ಬೀಸೋ ದೊಣ್ಣೆಯಿಂದ ಪಾರಾಗಿದ್ದಾರೆ. ಇದು ಮುಖ್ಯಮಂತ್ರಿಗಳಿಗೆ ಸಿಕ್ಕಿರೋ ತಾತ್ಕಾಲಿಕ ರಿಲೀಫ್ ಅಷ್ಟೇ. ಆಗಸ್ಟ್ 29 ಸಿದ್ದರಾಮಯ್ಯನವರ ಪಾಲಿಗೆ ಮಹತ್ವವಾಗಿದ್ದು, ರಾಜಕೀಯ ಭವಿಷ್ಯದ ನಿರ್ಣಾಯಕ ದಿನವಾಗಿದೆ. ಹಾಗಾದ್ರೆ 10 ದಿನಗಳ ನಂತರದ ಕಥೆಯೇನು.? ಕಾನೂನು ಕಂಟಕದಿಂದ ಸಿದ್ದರಾಮಯ್ಯ ಪಾರಾಗ್ತಾರಾ? ಎನ್ನುವುದರ ಮಾಹಿತಿ ಇಲ್ಲಿದೆ ನೋಡಿ. 

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದಿರುವ ಸಮಸ್ಯೆಯನ್ನು ಕಾನೂನಾತ್ಮಕವಾಗಿ ಹೋರಾಡಿ ಬಗೆಹರಿಸಿಕೊಳ್ಳಲು ಮುಂದಾಗಿದ್ದಾರೆ. ಅದರ ಮೊದಲ ಹೆಜ್ಜೆಯಲ್ಲಿ ಸಿದ್ದರಾಮಯ್ಯಗೆ ಮೊದಲ ಜಯ ಸಿಕ್ಕಿದೆ. ಇನ್ನುಳಿದ ಹಾದಿಯನ್ನು ರಾಜಕೀಯವಾಗಿ ಎದುರಿಸಲು 3 ರಣತಂತ್ರಗಳನ್ನು ಹೆಣೆದಿದ್ದಾರೆ.

Related Video