Asianet Suvarna News Asianet Suvarna News

ಗ್ಯಾರೆಂಟಿ ಯೋಜನೆ ಜಾರಿಗೆ ಸರ್ಕಸ್, ನಂಗೂ ಫ್ರೀ ನಿಂಗೂ ಫ್ರೀ ಹೇಳಿಕೆಯಿಂದ ಪೇಚಿಗೆ ಸಿಲುಕಿತಾ ಕಾಂಗ್ರೆಸ್?

ಅನ್ನಭಾಗ್ಯ ಯೋಜನೆಯ ಅಕ್ಕಿ ಖರೀದಿಗೆ ಸರ್ಕಾರ ಇನ್ನೂ ಆದೇಶ ಮಾಡಿಲ್ಲ, ಗೃಹ ಲಕ್ಷ್ಮಿ ಯೋಜನೆ ಜಾರಿಗೆ ಗೊಂದಲ, ಯಾರಿಗೆ ಕೊಡಬೇಕು ಹಣ, ಗ್ಯಾರೆಂಟಿ ಯೋಜನೆ ಜಾರಿಗೆ ಆಯಾ ಇಲಾಖೆ ಜೊತೆ  ಮೀಟಿಂಗ್ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

ಹಣಕಾಸು ಇಲಾಖೆ ಜೊತೆಗೆ ಕಾಂಗ್ರೆಸ್‌ನ ಉಚಿತ ಗ್ಯಾರೆಂಟಿ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಸರಣಿ ಸಭೆ ನಡೆಸಿದ್ದಾರೆ. ಯೋಜನೆ ವೆಚ್ಚ, ಜಾರಿ ಕುರಿತು ಸತತ ಸಭೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.ಗೃಹ ಲಕ್ಷ್ಮಿ ಯೋಜನೆ ಯಾರಿಗೆ ಹಲವು ಗೊಂದಲ ಎದುರಾಗಿದೆ. ಮನೆಯ ಯಜಮಾನಿಗೆ ಹಣ ನೀಡುವುದು ಹೇಗೆ? ಇದಕ್ಕೆ ಮಾನದಂಡಗಳೇನು? ಅನ್ನೋ ಕುರಿತು ಸತತ ಚರ್ಚೆ ನಡೆಯುತ್ತಿದೆ. ಅತ್ತೆಗೆ ಅಥವಾ ಸೊಸೆಗೆ ಹಣ ನೀಡಬೇಕಾ ಸೇರಿದಂತೆ ಹಲವು ಗೊಂದಲಗಳು ಎದುರಾಗಿದೆ.ಜೂನ್ ತಿಂಗಳಿನಿಂದ ಉಚಿತ ಅಕ್ಕಿ ನೀಡುವ ಯೋಜನೆ ಜಾರಿಯಾಗುವ ಸಾಧ್ಯತೆ ಕಾಣುತ್ತಿಲ್ಲ. ಕಾರಣ ಸರ್ಕಾರ ಹೆಚ್ಚುವರಿ ಅಕ್ಕಿ ಖರೀದಿಗೆ ಇನ್ನೂ ಆದೇಶ ನೀಡಿಲ್ಲ. ಹೀಗಾಗಿ ಅನ್ನಭಾಗ್ಯ ಯೋಜನೆ ಜಾರಿ ಜುಲೈ ತಿಂಗಳಲ್ಲಿ ಆಗುವ ಸಾಧ್ಯತೆ ಇದೆ