ಕಿವಿಗೆ ಹೂವಿಟ್ಟು ಪ್ರತಿಭಟಿಸಿದ ಕಾಂಗ್ರೆಸ್ ಇದೀಗ ಜನರ ತಲೆಗೆ ಚೆಂಡು ಹೂವಿಟ್ಟಿದೆ; ಹೆಚ್‌ಡಿಕೆ ಟೀಕೆ!

ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಜನರ ಅಭಿವೃದ್ಧಿ ಬಜೆಟ್ ಅಲ್ಲ. ಇದು ಕೇವಲ ಕೇಂದ್ರವನ್ನು ದೂಷಿಸುವ ಬಜೆಟ್ ಆಗಿದೆ ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಬೊಮ್ಮಾಯಿ ಬಜೆಟ್ ಮಂಡನೆ ವೇಳೆ ಕಿವಿಗೆ ಚೆಂಡು ಹೂ ಇಟ್ಟು ಪ್ರತಿಭಟಿಸಿದ ಕಾಂಗ್ರೆಸ್ ಇದೀಗ 6 ಕೋಟಿ ಜನರಿಗೆ ತಲೆಗೆ ಚೆಂಡು ಹೂ ಇಟ್ಟಿದ್ದಾರೆ ಎಂದು ಹೆಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

First Published Jul 7, 2023, 7:41 PM IST | Last Updated Jul 7, 2023, 7:45 PM IST

ಬೆಂಗಳೂರು(ಜು.07) ಕಳೆದ ಫೆಬ್ರವರಿಯಲ್ಲಿ ಬಸವರಾಜ್ ಬೊಮ್ಮಾಯಿ ಬಜೆಟ್ ಮಂಡಿಸುವಾಗ ಕಾಂಗ್ರೆಸ್ ನಾಯಕರು ಕಿವಿಗೆ ಚೆಂಡು ಹೂವು ಇಟ್ಟು ಪ್ರತಿಭಟನೆ ಮಾಡಿದ್ದರು. ಆದರೆ ಇದೀಗ ಕಾಂಗ್ರೆಸ್ ಮಂಡಿಸಿದ ಬಜೆಟ್ ಮೂಲಕ ರಾಜ್ಯದ 6 ಕೋಟಿ ಜನರ ತಲೆಗೆ ಚೆಂಡು ಹೂವಿಟ್ಟಿದ್ದಾರೆ ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಆರೋಗ್ಯ ಹಾಗೂ ಶಿಕ್ಷಣ ಅತ್ಯಂತ ಪ್ರಮುಖ. ಆದರೆ ಈ ಬಜೆಟ್‌ನಲ್ಲಿ ಈ ಪ್ರಮುಖ ಕ್ಷೇತ್ರಕ್ಕೆ ಏನು ಕೊಟ್ಟಿದ್ದಾರೆ. ತೇಪೆ ಹಚ್ಚುವ ಕೆಲಸ ಮಾಡಿ, ಎಲ್ಲಾ ಹಣ ತಮ್ಮ ಗ್ಯಾರೆಂಟಿ ಯೋಜನೆಗೆ ಇಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೆಚ್‌ಡಿಕೆ ಹೇಳಿದ್ದಾರೆ