5 ವರ್ಷ ನೀನೇ ಸಿಎಂ, ಬೇಡ ಅಂದವ್ರು ಯಾರು? ಆದರೆ ಈಗಲ್ಲ; ಡಿಕೆಶಿಗೆ ಸಿದ್ದು ಆಪ್ತರ ಠಕ್ಕರ್

ಡಿಕೆ ಶಿವಕುಮಾರ್ ವಿರುದ್ಧ ಶುರುವಾಗಿರೋ ಡೈರೆಕ್ಟ್ ವಾರ್.. ಸಿದ್ದು ಸಿಪಾಯಿಗಳೆಲ್ಲಾ ಸೇರಿ ಡಿಕೆ ವಿರುದ್ಧ ನೇರ ಯುದ್ಧ ಶುರು ಮಾಡಿದ್ದಾರೆ. ಬಂಡೆ ಪಟ್ಟಾಭಿಷೇಕವನ್ನು ತಡೆಯಲು ತಯಾರಿ ಆರಂಭಿಸಿದ್ದಾರೆ.

First Published Jan 11, 2025, 3:43 PM IST | Last Updated Jan 11, 2025, 3:43 PM IST

ಬೆಂಗಳೂರು(ಜ.11) ಇಲ್ಲಿವರೆಗೆ ಶೀತಲ ಸಮರ, ಈಗ ನೇರಾ ನೇರ ಯುದ್ಧ. ಡಿಕೆ ಶಿವಕುಮಾರ್ ವಿರುದ್ಧ ಡೈರೆಕ್ಟ್ ವಾರ್ ಶುರುವಾಗಿದೆ. ಡಿಕೆ ಪಟ್ಟಾಭಿಷೇಕವನ್ನು ತಡೆಯಲು ಸಿದ್ದರಾಯ್ಯ ಸಿಪಾಯಿಗಳು ನೇರವಾಗಿ ಅಖಾಡಕ್ಕಿಳಿದಿದ್ದಾರೆ. ಅತ್ತ ಬಂಡೆ ಹೈಕಮಾಂಡ್ ರಕ್ಷೆಯೇ ಬಲವಾದ್ರೆ, ಇದ್ದ ಸಿದ್ದರಾಮಯ್ಯ ಸೇನೆಗೆ ರಾಜನೀತಿಯೇ ರಣತಂತ್ರ.  ಎರಡೂವರೆ ವರ್ಷಕ್ಕೆ ಯಾಕಪ್ಪಾ ಒದ್ದಾಟ, ಗುದ್ದಾಟ.. 5 ವರ್ಷ ನೀನೇ ಮುಖ್ಯಮಂತ್ರಿಯಾಗು.. ಬೇಡ ಅಂದವ್ರು ಯಾರು..? ಎಂದು ಸಿದ್ದರಾಮಯ್ಯ ಅತ್ಯಾಪ್ತ ನೇರವಾಗಿ ಡಿಕೆ ಶಿವಕುಮಾರ್‌ಗೆ ಠಕ್ಕರ್ ನೀಡಿದ್ದಾರೆ.