ಶಿವಾಜಿ ಪ್ರತಿಮೆ ಉದ್ಘಾಟಿಸಿದ ಸಿಎಂ ಬೊಮ್ಮಾಯಿ, ಮಾ.5ಕ್ಕೆ ಇದೇ ಪ್ರತಿಮೆಯನ್ನು ಕಾಂಗ್ರೆಸ್‌ನಿಂದ ಉದ್ಘಾಟನೆ!

ರಾಜಕೀಯ ಹಗ್ಗಜಗ್ಗಾಟ ನಡುವೆ ಶಿವಾಜಿ ಪ್ರತಿಮೆ ಉದ್ಘಾಟನೆ, ಕರ್ನಾಟಕದಲ್ಲಿ ಬಿಜೆಪಿ ರಥಯಾತ್ರೆ ಅಬ್ಬರ, ಚುನಾವಣೆ ಗೆಲ್ಲಲು ಭರ್ಜರಿ ಪ್ರಚಾರ, ಬಿಜೆಪಿ ಶಾಸಕನ ಪುತ್ರ 40 ಲಕ್ಷ ರೂ ಲಂಚ ತೆಗೆದುಕೊಳ್ಳುವಾಗ ಲೋಕಾ ಬಲೆಗೆ, ರಾಮನಗರದಲ್ಲಿ ಆಸ್ಪತ್ರೆ ಉದ್ಘಾಟನೆ, ಒಂದೇ ವೇದಿಕೆಯಲ್ಲಿ ಹೆಚ್‌ಡಿಕೆ, ಅಶ್ವತ್ಥ್, ಡಿಕೆ ಸುರೇಶ್ ಸೇರಿದಂತೆ ಇಂದಿನ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ಬೆಳಗಾವಿಯಲ್ಲಿ ಶಿವಾಜಿ ಪ್ರತಿಮೆ ರಾಜಕೀಯ ಬಲು ಜೋರಾಗಿದೆ.ಸರ್ಕಾರದ ಅನುದಾನದಿಂದ ನಿರ್ಮಾಣಗೊಂಡಿರುವ ಶಿವಾಜಿ ಪ್ರತಿಮೆಯನ್ನು ಇತ್ತೀಚೆಗೆ ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಕಾಂಗ್ರೆಸ್ ಕಾರ್ಯಕ್ರಮವನ್ನಾಗಿ ಮಾಡಲು ಯತ್ನಿಸಿದ್ದರು. ಇದು ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಪಿತ್ತ ನೆತ್ತಿಗೇರಿಸಿತ್ತು. ಇದರಿಂದ ಪ್ರತಿಮೆ ಪಾಲಿಟಿಕ್ಸ್ ಆರಂಭಗೊಂಡಿತು. ಇದೀಗ ಸರ್ಕಾರಿ ಕಾರ್ಯಕ್ರಮದ ಮೂಲಕ ಪ್ರತಿಮೆ ಉದ್ಘಾಟನೆಗೊಂಡಿದೆ. ಇದೀಗ ಇದೇ ಪ್ರತಿಮೆಯನ್ನು ಹೆಬ್ಬಾಳ್ಕರ್ ಮಾರ್ಚ್ 5 ರಂದು ಮತ್ತೆ ಉದ್ಘಾಟಿಸುತ್ತಿದ್ದಾರೆ. ಶಿ ಈ ಪ್ರತಿಮೆಯನ್ನು ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆಯವರಿಂದ ಉದ್ಘಾಟನೆ ಮಾಡಲು ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಳ್ಕರ್ ತಯಾರಿ ನಡೆಸಿದ್ದರು. ಸರ್ಕಾರದ ಹಣದಿಂದ ಕಟ್ಟಿಸಿದ ಶಿವಾಜಿ ಪ್ರತಿಮೆ ಕಾರ್ಯಕ್ರಮವನ್ನು ಕಾಂಗ್ರೆಸ್ ಕಾರ್ಯಕ್ರಮ ಮಾಡಲು ಬಿಡುವುದಿಲ್ಲ ಎಂದು ರಮೇಶ್ ಜಾರಕಿಹೊಳಿ ಪಟ್ಟು ಹಿಡಿದು ಸರ್ಕಾರಿ ಕಾರ್ಯಕ್ರಮ ಆಯೋಜಿಸುವಲ್ಲಿ ಯಶಸ್ವಿಯಾಗಿದ್ದಾರೆ . ಇಂದಿನ ಕಾರ್ಯಕ್ರಮಕ್ಕೈ ಗೈರಾಗಿರುವ ಹೆಬ್ಬಾಳ್ಕರ್, ಮಾರ್ಚ್ 5ರಂದು ಪ್ರತಿಮೆ ಉದ್ಘಾಟನೆಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video