
ಬೆಳ್ಳಂ ಬೆಳಗ್ಗೆ ಅಮಿತ್ ಶಾ ಜತೆ ಸಿಎಂ ಬೊಮ್ಮಾಯಿ ಮಾತುಕತೆ: ಭಾರೀ ಕುತೂಹಲ ಮೂಡಿಸಿದ ಸಭೆ
* ಅನಗತ್ಯ ಗೊಂದಲ ಚರ್ಚೆಗಳ ಅಮಿತ್ ಶಾ ಬ್ರೇಕ್ ಹಾಕ್ತಾರಾ ಅಮಿತ್ ಶಾ?
* ಚುನಾವಣಾ ಚಾಣಕ್ಯ ಅಮಿತ್ ಶಾ ರಾಜ್ಯಕ್ಕೆ ಆಗಮನ
* ಸಂಪುಟ ವಿಸ್ತರಣೆ, ಪುನರ್ ರಚನೆ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚೆ
ಬೆಂಗಳೂರು(ಮೇ.03): ಚುನಾವಣಾ ಚಾಣಕ್ಯ ಅಮಿತ್ ಶಾ ಇಂದು(ಮಂಗಳವಾರ) ರಾಜ್ಯಕ್ಕೆ ಆಗಮಿಸಿದ್ದಾರೆ. ಬೆಳ್ಳಂಬೆಳಿಗ್ಗೆ ಅಮಿತ್ ಶಾ ಜತೆ ಸಿಎಂ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಿದ್ದಾರೆ. ನಗರದ ಖಾಸಗಿ ಹೋಟೆಲ್‌ನಲ್ಲಿ ಅಮಿತ್ ಶಾ ಜತೆ ಬಸವರಾಜ ಬೊಮ್ಮಾಯಿ ಮೀಟಿಂಗ್ ಮಾಡಿದ್ದಾರೆ. ಇಬರಿಬ್ಬ ಭೇಟಿ ಇದೀಗ ಭಾರೀ ಮಹತ್ವ ಪಡೆದುಕೊಂಡಿದೆ. ಸಂಪುಟ ವಿಸ್ತರಣೆ, ಪುನರ್ ರಚನೆ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ ಅಂತ ತಿಳಿದು ಬಂದಿದೆ. ಅಮಿತ್ ಶಾ ಅನಗತ್ಯ ಗೊಂದಲ ಚರ್ಚೆಗಳ ಅಮಿತ್ ಶಾ ಬ್ರೇಕ್ ಹಾಕ್ತಾರಾ ಎಂಬುದನ್ನ ಕಾದುನೋಡಬೇಕಿದೆ.
PSI ಅಕ್ರಮ: ಸ್ಫೋಟಕ ಮಾಹಿತಿ ಬಿಚ್ಚಿಡುತ್ತೇನೆ: ಎಚ್ ಡಿ ಕುಮಾರಸ್ವಾಮಿ