'ನಮ್ಮದೇ ಸೋಲು ಅಂತೀರಲ್ಲ.. ಅವರೇನೂ ಸೋತಿಲ್ವ'

* ಹೊರಬಂದ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ
* ಕಲಬುರಗಿಯಲ್ಲಿ ಅಧಿಕಾರ ಸ್ಥಾಪನೆ ಮಾಡ್ತೆವೆ ಎಂದ ಡಿಕೆಶಿ
* ನಾವು ಅಂದುಕೊಂಡ ಫಲಿತಾಂಶ ಬಂದಿಲ್ಲ; ಸಿದ್ದರಾಮಯ್ಯ
* ಬಿಜೆಪಿಯವರು ಬೆಳಗಾವಿಯಲ್ಲಿ  ಬಹುಮತ ಗಳಿಸಿದ್ದಾರೆ

First Published Sep 6, 2021, 7:02 PM IST | Last Updated Sep 6, 2021, 7:02 PM IST

ಬೆಂಗಳೂರು(ಸೆ. 06)   ಕೆಲವು ಕಡೆ ನಾವು ಅಧಿಕಾರಕ್ಕೆ ಬರುತ್ತೇವೆ ಎಂದೂ ಅಂದುಕೊಂಡಿರಲ್ಲ.. ಆದರೆ ನಿರೀಕ್ಷಿತ ಫಲಿತಾಂಶ ಬಂದಿದೆ. ಇಲ್ಲಿ ಎಲ್ಲರಿಗೂ ಸೋಲಾಗಿದೆ. ನೀವು ನಮ್ಮದೇ ಸೋಲು ಅಂತಿರಲ್ಲ.. ಕಲಬುರಗಿಯಲ್ಲಿ ನಾವೇ ದೊಡ್ಡ ಪಕ್ಷ.. ಪಾಲಿಕೆ ಫಲಿತಾಂಶದ ನಂತರ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಅಧಿಕಾರಕ್ಕೇರಿ ಬಿಜೆಪಿ ಇತಿಹಾಸ

ಬೆಳಗಾವಿಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬಂದಿದೆ. ಬೆಳಗಾವಿಯಲ್ಲಿ ಬೇರೆ ಬೇರೆ ಕಾರಣಕ್ಕೆ ಓಟು ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನೊಂದು ಕಡೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್ ಫಲಿತಾಂಶ ನಮ್ಮ ಪರವಾಗಿಯೇ ಇದೆ ಎಂದು ವಿಶ್ಲೇಷಣೆ ಮಾಡಿದ್ದು ಕಲಬುರಗಿಯಲ್ಲಿ ಅಧಿಕಾರ ಸ್ಥಾಪನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. 

Video Top Stories