ಸಿದ್ದರಾಮಯ್ಯರಿಗೆ ಕಾಡುತ್ತಿದೆ ಸಂಗೊಳ್ಳಿ ರಾಯಣ್ಣನ ದುರಂತ ಅಂತ್ಯದ ಭಯ?

ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ವಿರುದ್ಧ ನಡೆಯುತ್ತಿರುವ ಮುಡಾ ಆರೋಪಗಳನ್ನು ಸಂಗೊಳ್ಳಿ ರಾಯಣ್ಣನ ಮೇಲಾದ ಮೋಸಕ್ಕೆ ಹೋಲಿಸಿದ್ದಾರೆ. ತಮ್ಮದೇ ಪಕ್ಷದೊಳಗೆ ಹಿತಶತ್ರುಗಳು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.

First Published Sep 18, 2024, 1:43 PM IST | Last Updated Sep 18, 2024, 1:43 PM IST

ಮತ್ತೆ ಮತ್ತೆ ಸಂಗೊಳ್ಳಿ ರಾಯಣ್ಣನಿಗಾದ ಮೋಸದ ಕಥೆ ಹೇಳ್ತಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ..! ಮಹಾಯೋಧನ ದುರಂತ ಅಂತ್ಯಕ್ಕೆ ಕಾರಣವಾಗಿತ್ತು ಹಿತಶತ್ರುಗಳೇ ಸೇರಿ ಹೆಣೆದಿದ್ದ ಆ ಸಂಚು..! ಅಂದು ಸಂಗೊಳ್ಳಿ ರಾಯಣ್ಣ, ಇಂದು ನಾನು..? ಏನಿದರ ಮರ್ಮ..? ಸಿದ್ದರಾಮಯ್ಯ ವಿರುದ್ಧವೂ ಮುಡಾ ಸಂಚು ಹೆಣೆದು ಆಟ ಶುರು ಮಾಡಿದವರು ಸಿದ್ದು ಹಿತಶತ್ರುಗಳೇನಾ..? ಹೋದಲ್ಲಿ, ಬಂದಲ್ಲಿ ಮುಖ್ಯಮಂತ್ರಿಗಳನ್ನು ಕಾಡ್ತಾ ಇರೋದ್ಯಾಕೆ ಸಂಗೊಳ್ಳಿ ರಾಯಣ್ಣನ ಹಿತಶತ್ರುಗಳ ಕಥೆ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, 

ಅಂದು ಸಂಗೊಳ್ಳಿ ರಾಯಣ್ಣನಿಗೆ ಹಿತಶತ್ರುಗಳಿಂದ್ಲೇ ಮೋಸ ಆಗಿತ್ತು. ಇಂದು ಮುಡಾ ಕೇಸ್'ನಲ್ಲಿ ನನ್ನ ವಿರುದ್ಧ ಕುತಂತ್ರ, ಷಡ್ಯಂತ್ರ..! ಮುಖ್ಯಮಂತ್ರಿ ಸಿದ್ದರಾಮಯ್ಯನವರ ಈ ಮಾತಿನ ಮರ್ಮ ಏನು..? ನನ್ನ ವಿರುದ್ಧ ಕಾಂಗ್ರೆಸ್'ನಲ್ಲೇ ಸಂಚು ಹೆಣೆಯಲಾಗಿದೆ ಅನ್ನೋದನ್ನು ಸಂಗೊಳ್ಳಿ ರಾಯಣ್ಣನ ಉದಾಹರಣೆ ಮೂಲಕ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ನನ್ನನ್ನು ರಾಜಕೀಯವಾಗಿ ಮುಗಿಸೋ ಮಾತಿರ್ಲಿ, ಟಚ್ ಮಾಡೋದಕ್ಕೂ ಆಗಲ್ಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅಬ್ಬರಿಸಿದ್ದಾರೆ. ಚರಿತ್ರೆಯ ಪುಟ ಸೇರಿರೋ 40 ವರ್ಷಗಳ ಅದೊಂದು ಘಟನೆಯನ್ನು ನೆನಪಿಸಿದ್ದಾರೆ. ಹಾಗಾದ್ರೆ ಯಾರು ಆ ಹಿತಶತ್ರುಗಳು. ಇದು ಸದ್ಯಕ್ಕೆ ಉತ್ತರ ಸಿಗದ ಯಕ್ಷಪ್ರಶ್ನೆ.