News Hour: ಕಾಂಗ್ರೆಸ್‌ನಲ್ಲಿ ಜೋರಾಯ್ತು ‘ಸಿಎಂ’ ಕುರ್ಚಿ ಕದನ: ಎಲ್ಲೆಲ್ಲೂ ಮುಖ್ಯಮಂತ್ರಿಯದ್ದೇ ಜಪ..!

ಮನೆಯೊಂದು ಮೂರು ಬಾಗಿಲಾಗಿರುವ ರಾಜ್ಯ ಕಾಂಗ್ರೆಸ್ನಲ್ಲಿ ನಾಯಕರು ಕುಂತರೂ ನಿಂತರೂ ಸಿಎಂ ಸ್ಥಾನದ ಜಪದಲ್ಲಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಜು. 20): ಮನೆಯೊಂದು ಮೂರು ಬಾಗಿಲಾಗಿರುವ ರಾಜ್ಯ ಕಾಂಗ್ರೆಸ್ನಲ್ಲಿ ನಾಯಕರು ಕುಂತರೂ ನಿಂತರೂ ಸಿಎಂ ಸ್ಥಾನದ ಜಪದಲ್ಲಿದ್ದಾರೆ. ಇಷ್ಟು ದಿನ ಸಿದ್ದರಾಮಯ್ಯ, ಶಿವಕುಮಾರ್ಗೆ ಜೈ ಜೈ ಎಂದಿದ್ದ ಕಾಂಗ್ರೆಸ್ ಕಾರ್ಯಕರ್ತರು, ಈಗ ಸಿಕ್ಕ ಸಿಕ್ಕ ನಾಯಕರ ಹೆಸರು ಹೇಳಿ ನೀವೆ ಸಿಎಂ ಎಂದು ಜೈಕಾರ ಹಾಕ್ತಿದ್ದಾರೆ.

ಏಷ್ಯಾನೆಟ್‌ ಸಮೂಹದಿಂದ ಅಮೃತ ಮಹೋತ್ಸವ ಯಾತ್ರೆ: ರಾಜ್ಯಪಾಲರಿಂದ ಚಾಲನೆ

ಸಿದ್ದರಾಮಯ್ಯ, ಶಿವಕುಮಾರ್, ಎಂ.ಬಿ ಪಾಟೀಲ್, ಪರಮೇಶ್ವರ್, ಖರ್ಗೆ ನಡುವೆ ನಡೆಯುತ್ತಿದ್ದ ಸಿಎಂ ಕುರ್ಚಿ ರೇಸ್‌ನಲ್ಲಿ ಇಂದು ರಾಮಲಿಂಗಾರೆಡ್ಡಿ ಹೆಸರು ಕೇಳಿ ಬಂತು. ರೆಡ್ಡಿ ಸಾರ್ ನೀವೆ ಮುಂದಿನ ಸಿಎಂ ಎಂದು ಅಭಿಮಾನಿಗಳು ಕೂಗಿದ್ರು. ಇನ್ನು ಮೈಸೂರಿನಲ್ಲಿ ನಡೆದ ಸಿದ್ದರಾಮೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾಜಿ ಸಚಿವ ಮಹದೇವಪ್ಪ ನಾನೇ ಮುಂದಿನ ಮುಖ್ಯಮಂತ್ರಿ ಅಂದ್ಬಿಟ್ರು.

Related Video