ಚೆಲುವ ಕನ್ನಡ ನಾಡಿನಲ್ಲಿ ಚೆಲುವರಾಯಸ್ವಾಮಿಯ ದ್ವೇಷದ ರಾಜಕಾರಣ!

ಚೀಪ್ ಪಾಪ್ಯುಲಾರಿಟಿ ಹೇಳಿಕೆ ನೀಡಿದ ಇದೀಗ ಸಚಿವ ಚೆಲುವರಾಯಸ್ವಾಮಿ ಯು ಟರ್ನ್ ಹೊಡೆದಿದ್ದಾರೆ. ಗೃಹ ಲಕ್ಷ್ಮಿ ಯೋಜನೆಗೆ ಷರತ್ತು ಅನ್ವಯ, ಜೂನ್ 11ಕ್ಕೆ ಸಚಿನ್ ಪೈಲೆಟ್ ಹೊಸ ಪಕ್ಷ ಸ್ಥಾಪನೆ ಸಾಧ್ಯತೆ ಸೇರಿದಂತೆ ಇಂದಿನ ಇಡೀ ದಿನದ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ಯಾರು ನನಗೆ ಮತಹಾಕಿಲ್ಲ, ಅವರಿಗೆ ನಾನು ಯಾವುದೇ ಕೆಲಸ ಮಾಡುವುದಿಲ್ಲ. ನನಗೆ ಮತಹಾಕದವರಿಗೆ ಯಾವುದೇ ಸಹಿ ಹಾಕಲ್ಲ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ. ಮನೆ ಹತ್ರ ಬಂದರೂ ನಾನು ಅವರ ಕೆಲಸ ಮಾಡಿಕೊಡುವುದಿಲ್ಲ. ನಾನು ಕೂಲ್ ಆಗಿರಲು ಸಾಧ್ಯವಿಲ್ಲ. ಈ ಚುನಾವಣೆಯಲ್ಲಿ ನಮಗೆ ಸಹಕಾರ ಕೊಟ್ಟವರಿಗೆ ನರೆವು, ಮುಂದಿನ ಚುನಾವಣೆಗೆ ಯಾರು ಬಹಿರಂಗವಾಗಿ ಕೆಲಸ ಮಾಡುತ್ತಾರೆ ಅವರಿಗೆ ಕೆಲಸ ಮಾಡಿಕೊಡುತ್ತೇನೆ ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ. ನಿನ್ನೆ ಕಾಂಗ್ರೆಸ್ ಉಚಿತ ಗ್ಯಾರೆಂಟಿ ಚೀಪ್ ಪಾಪ್ಯುಲಾರಿಟಿ ಎಂದು ಯೂಟರ್ನ್ ಹೊಡೆದ ಚೆಲುವರಾಯಸ್ವಾಮಿ ಇದೀಗ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

Related Video