Karnataka Politics: ಇಂದು ಕರ್ನಾಟಕಕ್ಕೆ ಅಮಿತ್ ಶಾ, ಕಮಲ ಪಾಳಯದಲ್ಲಿ ಭಾರೀ ಸಂಚಲನ
* ಮುಸ್ಲಿಮರಿಂದ ಹಿಂದೂ ದೇವರ ಕತ್ತನೆ: ಮುಸ್ಲಿಂ ಶಿಲ್ಪಿಗಳಿಗೆ ಕುಮಾರಸ್ವಾಮಿ ಪ್ರಸಂಸೆ
* ಮತ್ತೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಿ: ಉಡುಪಿ ಪೇಜಾವರ ಶ್ರೀಗಳಿಗೆ ಮುಸ್ಲಿಮರ ಮನವಿ
* ನಮ್ಮಲ್ಲಿ ನೋ ರೈಟ್, ನೋ ಲೆಫ್ಟ್ ಯಾವುದೂ ಇಲ್ಲ: ಸಿಎಂ ಬೊಮ್ಮಾಯಿ
ಬೆಂಗಳೂರು(ಮಾ.31): ಇಂದು(ಗುರುವಾರ) ಸಂಜೆ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ. ನಾಳೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಸಂಜೆ 6 ಗಂಟೆಗೆ ಅಮಿತ್ ಶಾ ನೇತೃತ್ವದಲ್ಲಿ ಕೋರ್ ಕಮೀಟಿ ಸಭೆ ನಡೆಯಲಿದೆ.
* ಇಂದಿನಿಂದ ಎರಡು ದಿನ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಮಾಡಲಿದ್ದಾರೆ. ಪಕ್ಷ ಸಂಘಟನೆ ಕುರಿತು ರಾಹುಲ್ ಗಾಂಧಿ ವಿಶೇಷ ಸಭೆ ನಡೆಸಿದ್ದಾರೆ.
* ರಾಜ್ಯವ್ಯಾಪಿ ಹರಡುತ್ತಿದೆ ಹಲಾಲ್ ಕಿಚ್ಚು, ಹಲಾಲ್ ಬೇಡ, ಜಟ್ಕಾ ಮಾಂಸ ಖರೀದಿಸಿ ಅಂತ ಹಿಂದೂಪರ ಸಂಘಟನೆಗಳು ಮನವಿ ಮಾಡಿಕೊಂಡಿವೆ.
News Hour: ಕಲಾಪದಲ್ಲೂ ಹಲಾಲ್ ಪ್ರತಿಧ್ವನಿ.. ಇಬ್ರಾಂ ಹೇಳಿದ ವಿಧಾನ!
* ನಮ್ಮ ನಿಲುವು ಏನೆಂಬುದನ್ನ ಮುಂದೆ ಹೇಳುತ್ತೇವೆ. ನಮ್ಮಲ್ಲಿ ನೋ ರೈಟ್, ನೋ ಲೆಫ್ಟ್ ಯಾವುದೂ ಇಲ್ಲ ಅಂತ ಹಲಾಲ್, ಟಿಪ್ಪು ವಿವಾದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.
* ಮತ್ತೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಿ ಅಂತ ಉಡುಪಿ ಪೇಜಾವರ ಶ್ರೀಗಳಿಗೆ ಮುಸ್ಲಿಮರು ಮನವಿ ಮಾಡಿಕೊಂಡಿದ್ದಾರೆ.
* ಮುಸ್ಲಿಮರಿಂದ ಹಿಂದೂ ದೇವರ ಕತ್ತನೆ ಮಾಡಿದ ಮುಸ್ಲಿಂ ಶಿಲ್ಪಿಗಳನ್ನ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಸಂಸಿದ್ದಾರೆ.