ಜಾತಿಗಣತಿ ವರದಿ: ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಸಮ್ಮಿಶ್ರ ಸರ್ಕಾರದಲ್ಲಿ ವರದಿ ಸ್ವೀಕರಿಸುವಂತೆ ನಾನು ಸೂಚಿಸಿದ್ದೆ. ಆದ್ರೆ ಕುಮಾರಸ್ವಾಮಿ ಅವರೇ ಜಾತಿ ಗಣತಿ ವರದಿ ಸ್ವೀಕರಿಸಬೇಡಿ ಎಂದು ಹೇಳಿದ್ರು. ಸಮ್ಮಿಶ್ರ ಸರ್ಕಾರ ಆದ ಕಾರಣ ನಾನು ಅಂದು ಸುಮ್ಮನಿದ್ದೆ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರು, (ಆ.20): ಜಾತಿಗಣತಿ ವರದಿಯನ್ನ ಬಿಜೆಪಿ ಸರ್ಕಾರ ಸ್ವೀಕರಿಸಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕಾಂಗ್ರೆಸ್ ಮಾಡಿದ ಜಾತಿ ಗಣತಿ ವರದಿ ಬಿಡುಗಡೆ ಮಾಡಿ; ಸರ್ಕಾರಕ್ಕೆ ಗುಂಡೂರಾವ್ ಒತ್ತಾಯ!
ಈ ಬಗ್ಗೆ ಇಂದು (ಆ.20) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದು, ಜಾತಿ ಗಣತಿಯನ್ನ ಸಿದ್ದರಾಮಯ್ಯ ಬರೆಸಿದ್ದು ಅಂತಾ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ನನ್ನ ಕೈಗೆ ವರದಿಯೇ ಬಂದಿರಲಿಲ್ಲ.. ನಾನು ಹೇಗೆ ಬರೆಸಲು ಸಾಧ್ಯ ಎಂದರು.