ಶಾಸಕ ಮಾಡಾಳ್ ಬಂಧನ: ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾದ ಕಮಲಪಡೆ

ಚನ್ನಗಿರಿ ಕ್ಷೇತ್ರದ BJP ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನ ರಾಜ್ಯ ರಾಜಕೀಯದಲ್ಲಿ ದೊಡ್ಡ ಕಂಪನವನ್ನೇ ಎಬ್ಬಿಸಿದೆ. ವಿರೂಪಾಕ್ಷಪ್ಪನನ್ನು ಪಕ್ಷದಿಂದ  ಉಚ್ಚಾಟನೆ ಮಾಡದಿರಲು ಬಿಜೆಪಿ ಪ್ಲಾನ್‌ ಮಾಡಿದೆ.

First Published Mar 28, 2023, 11:09 AM IST | Last Updated Mar 28, 2023, 12:11 PM IST

ಲಂಚ ಸ್ವೀಕಾರ ಕೇಸ್​​ನಲ್ಲಿ ಸಿಲುಕಿರುವ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನನ್ನು  ಪೊಲೀಸರು ಬಂಧಿಸಿದ್ದಾರೆ. ತುಮಕೂರಿನ ಹೊರವಲಯದಲ್ಲಿರುವ ಕ್ಯಾತ್ಸಂದ್ರ ಟೋಲ್‌ ಬಳಿ ನಿನ್ನೆ ಖಾಕಿ ಪಡೆ ಬಂಧಿಸಿದೆ. ಇನ್ನು ಚನ್ನಗಿರಿ ಕ್ಷೇತ್ರದ BJP ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನ ರಾಜ್ಯ ರಾಜಕೀಯದಲ್ಲಿ ದೊಡ್ಡ ಕಂಪನವನ್ನೇ ಎಬ್ಬಿಸಿದೆ. ವಿರೂಪಾಕ್ಷಪ್ಪನನ್ನು ಪಕ್ಷದಿಂದ  ಉಚ್ಚಾಟನೆ ಮಾಡದಿರಲು ಬಿಜೆಪಿ ಪ್ಲಾನ್‌ ಮಾಡಿದ್ದು, ಬಂಧನ ಪರಿಗಣಿಸಿ ಮಾಡಾಳ್‌ ವಿರುದ್ಧ ಬಿಜೆಪಿ ಶಿಸ್ತು ಕ್ರಮ ಸಾಧ್ಯತೆ ಇದೆ. ಅದಲ್ಲದೆ ಮಾಡಾಳ್‌ಗೆ ಅಸೆಂಬ್ಲಿ ಚುನಾವಣೆಗೆ ಟಿಕೆಟ್‌ ನೀಡದಿರಲು ಬಿಜೆಪಿ ತೀರ್ಮಾನಿಸಿದೆ ಎನ್ನಲಾಗಿದೆ. 

Video Top Stories