ಚುನಾವಣಾ ಅಕ್ರಮ ನಡೀತಿದ್ಯಾ? ಸಿ - ವಿಜಿಲ್ ಮೂಲಕ ದೂರು ನೀಡಿ
ಕರ್ನಾಟಕ ವಿಧಾನಸಭೆ ಚುನಾವಣೆ ರಂಗೇರುತ್ತಿದೆ. ಎಲ್ಲಾ ಪಕ್ಷಗಳು ತಮ್ಮ ಅಭ್ಯರ್ಥಿಗಳ ಹೆಸರನ್ನ ಘೋಷಿಸುತ್ತಿದೆ. ಇದರ ಬೆನ್ನಲ್ಲೇ ಕುರುಡು ಕಾಂಚಾಣ ಕುಣಿಯುತ್ತಿದೆ. ಕೋಟಿ ಕೋಟಿ ಹಣ, ಲಕ್ಷಾಂತರ ಉಡುಗೊರೆಯನ್ನ ಪೊಲೀಸರು ಜಪ್ತಿ ಮಾಡ್ತಿದ್ದಾರೆ. ನಿಮ್ಮ ಸುತ್ತಮುತ್ತ ಹಣ, ಉಡುಗೊರೆ ನೀಡುತ್ತಿದ್ದರು, ಮೊಬೈಲ್ ಮೂಲಕ ಕಂಪ್ಲೇಂಟ್ ಮಾಡಬಹುದು. ಹಾಗಾದರೆ ಹೇಗೆ ಅನ್ನುವುದನ್ನು ನೋಡಿ
ಕರ್ನಾಟಕ ವಿಧಾನಸಭೆ ಚುನಾವಣೆ ರಂಗೇರುತ್ತಿದೆ. ಎಲ್ಲಾ ಪಕ್ಷಗಳು ತಮ್ಮ ಅಭ್ಯರ್ಥಿಗಳ ಹೆಸರನ್ನ ಘೋಷಿಸುತ್ತಿದೆ. ಇದರ ಬೆನ್ನಲ್ಲೇ ಕುರುಡು ಕಾಂಚಾಣ ಕುಣಿಯುತ್ತಿದೆ. ಕೋಟಿ ಕೋಟಿ ಹಣ, ಲಕ್ಷಾಂತರ ಉಡುಗೊರೆಯನ್ನ ಪೊಲೀಸರು ಜಪ್ತಿ ಮಾಡ್ತಿದ್ದಾರೆ. ನಿಮ್ಮ ಸುತ್ತಮುತ್ತ ಹಣ, ಉಡುಗೊರೆ ನೀಡುತ್ತಿದ್ದರು, ಮೊಬೈಲ್ ಮೂಲಕ ಕಂಪ್ಲೇಂಟ್ ಮಾಡಬಹುದು. ಇನ್ನು ಚುನಾವಣಾ ಆಯೋಗ ಸಿ-ವಿಜಿಲ್(cVIGIL) ಎಂಬ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಜನರು ಅಕ್ರಮಗಳ ಬಗ್ಗೆ ಮೊಬೈಲ್‍ಗಳ ಮೂಲಕ ನೇರವಾಗಿ ಆಯೋಗಕ್ಕೆ ಮಾಹಿತಿ ನೀಡಬಹುದು. ದೂರುದಾರರ ಹೆಸರು, ವಿಳಾಸವನ್ನು ಆಯೋಗ ಗೌಪ್ಯವಾಗಿ ಇಡಲಿದೆ.
ಸಿ-ವಿಜಿಲ್ ಅಪ್ಲಿಕೆಷನನ್ನ ಹೇಗೆ ಯೂಸ್ ಮಾಡೋದು..? ಹೇಗೆ ಕಂಪ್ಲೀಂಟ್ ಕೊಡಬೇಕು ಅನ್ನೋದನ್ನ ಹೇಳ್ತಾ ಹೋಗ್ತಿವಿ ನೋಡಿ.
1.Play store ನಲ್ಲಿ c VIGIL ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.
2. ಅಪ್ಲಿಕೇಶನ್ ಓಪನ್ ಮಾಡಿದ ನಂತರ ನಿಮ್ಮ ಮೊಬೈಲ್ ನಂಬರ್ ಹಾಕಿ, ಲಾಗ್ಇನ್ ಆಗಿ
3. ಲಾಗ್ಇನ್ ಆದ ಬಳಿಕ ನಿಮ್ಮ ಮುಂದೆ PHOTO VIDEO AUDIO ಹೀಗೆ ಮೂರು ಆಯ್ಕೆ ಕಾಣಿಸುತ್ತೆ.
4. ಉದಾಹರಣೆಗೆ ನೀವು ಫೋಟೊ ಕ್ಲಿಕ್ ಮಾಡಿ ಮಾಹಿತಿ ನೀಡೋದಾದ್ರೆ, ಫೋಟೊ ಕ್ಲಿಕ್ ಮಾಡಿದಾಗ, ಫೋಟೊ ಜೆತೆಗೆ ನೀವಿರೋ ಲೊಕೆಷನ್ ರೆಜಿಸ್ಟರ್ ಆಗುತ್ತೆ.
5. ನಂತರ 16 ರೀತಿಯ ದೂರಿನ ಆಯ್ಕೆ ಕಾಣಿಸುತ್ತೆ..? ಅಂದ್ರೆ ಹಣ ವಿತರಣೆ ಮಾಡ್ತಿದ್ದಾರಾ..? ಉಡುಗೊರೆ ಕೊಡ್ತಿದ್ದಾರಾ..? ಪೊಸ್ಟರ್, ಬ್ಯಾನರ್ ಹಾಕ್ತಿದ್ದಾರಾ..? ಮದ್ಯಪಾನ ಹಂಚುತಿದ್ದಾರಾ..? ಹೀಗೆ ಅನೇಕ ಆಯ್ಕೆ ಲಭ್ಯವಿದ್ದು, ಅದ್ರಲ್ಲಿ 16 ರೀತಿಯ ದೂರುಗಳಲ್ಲಿ ಒಂದನ್ನ ಆಯ್ಕೆ ಮಾಡಿಕೊಂಡು ಸಬ್ಮಿಟ್ ಮಾಡ್ಬೇಕು.
6. ನಂತರ ನೀವು ಹೆಚ್ಚಿನ ಮಾಹಿತಿ ಬರೆಯುವಿರಾದರೆ ಕಮೆಂಟ್ ಬಾಕ್ಸ್ ನಲ್ಲಿ ಬರೆಯಬಹುದು.. ಅದಾದ ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಕಂಪ್ಲೇಂಟ್ ಚುನಾವಣಾ ಆಯೋಗಕ್ಕೆ ತಲುಪತ್ತೆ.