ನವೆಂಬರ್ 15ಕ್ಕೆ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪದಗ್ರಹಣ!

ಲೋಕಸಭೆಯಲ್ಲಿ ವಿಜಯೇಂದ್ರ vs ಡಿಕೆ ಶಿವಕುಮಾರ್ ನಡುವಿನ ಕದನ, ಆದಿ ಚುಂಚನಗಿರಿ ಮಠದಲ್ಲಿ ವಿಜಯೇಂದ್ರ-ಎಂಬಿಪಾಟೀಲ್ ಭೇಟಿ, ನವೆಂಬರ್ 15ಕ್ಕೆ ಬಿಜೆಪಿ ನೂತನ ಅಧ್ಯಕ್ಷ ಬಿವೈ ವಿಜಯೇಂದ್ರ ಪದಗ್ರಹಣ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ವಿವರ ಇಲ್ಲಿದೆ.
 

Share this Video
  • FB
  • Linkdin
  • Whatsapp

ಬಿವೈ ವಿಜಯೇಂದ್ರ ಅವರನ್ನು ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಈ ಆಯ್ಕೆ ಕುರಿತು ಕರ್ನಾಟಕ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಬಂಡಾಯ ಎದ್ದಿದ್ದ ಎಂಪಿ ರೇಣುಕಾಚಾರ್ಯ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯಾಧ್ಯಕ್ಷಕರಾಗಿ ಆಯ್ಕೆಯಾದ ವಿಜಯೇಂದ್ರ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ನಿರ್ಮಲಾನಂದ ಸ್ವಾಮೀಜಿ ಆಶೀರ್ವಾದ ಪಡೆದಿದ್ದಾರೆ. ಇದೇ ವೇಳೆ ಮಠಕ್ಕೆ ಕಾಂಗ್ರೆಸ್ ಸಚಿವ ಎಂಬಿಪಾಟೀಲ್ ಕೂಡ ಮಠಕ್ಕೆ ಆಗಮಿಸಿದ್ದರು. ಈ ನಾಯಕರು ಮಠದಲ್ಲಿ ಮುಖಾಮುಖಿ ಭೇಟಿಯಾಗಿದ್ದಾರೆ.ಲೋಕಸಭೆ ಚುನಾವಣೆಯಲ್ಲಿ ಇದೀಗ ಬಿವೈ ವಿಜಯೇಂದ್ರ ಹಾಗೂ ಡಿಕೆ ಶಿವಕುಮಾರ್ ನಡುವಿನ ಕದನ ಶುರುವಾಗಿದೆ. ಒಕ್ಕಲಿಗ ಸಮುದಾಯದ ಪ್ರಮುಖ ನಾಯಕ ಡಿಕೆಶಿಯಾದರೆ, ಇತ್ತ ಲಿಂಗಾಯಿತ ಸಮುದಾಯದ ಪ್ರಬಲ ನಾಯಕ ವಿಜಯೇಂದ್ರ. ಇವರಿಬ್ಬರ ಕದನ ಕುತೂಹಲ ಹೆಚ್ಚಾಗಿದೆ.

Related Video