ಉಪಮುಖ್ಯಮಂತ್ರಿ ಹುದ್ದೆ ಕೊಡಲ್ಲ: ಖಡಕ್ ಆಗಿ ಹೇಳಿದ ಬಿಜೆಪಿ ನಾಯಕ

ಯಾರಿಗೆ ಯಾವ ಖಾತೆ ಅನ್ನೋದು ಮಾತ್ರ ಬಿಎಸ್ ವೈ ಅವರನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.  ಹಲವು ಘಟಾನುಘಟಿಗಳು ಪ್ರಬಲ ಖಾತೆಯನ್ನೇ ಬಯಸುತ್ತಿದ್ದಾರೆ. ಅದರಲ್ಲೂ ಅನರ್ಹ ಶಾಸಕ ಗುಂಪಿನ ಕ್ಯಾಪ್ಟನ್ ಉಪಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದರು.  ಆದ್ರೆ, ಉಪಮುಖ್ಯ ಮಂತ್ರಿ ಹುದ್ದೆ ಯಾರಿಗೂ ಇಲ್ಲ ಎಂದು ಬಿಜೆಪಿ ನಾಯಕ ಖಡಕ್ ಆಗಿ ಹೇಳಿದ್ದಾರೆ. 
 
Share this Video
  • FB
  • Linkdin
  • Whatsapp

ಬೆಂಗಳೂರು, [ಡಿ.10]: ಕಾಂಗ್ರೆಸ್, ಜೆಡಿಎಸ್ನಿಂದ ಬಂಡಾಯವೆದ್ದ ಶಾಸಕರ ಕಾರಣದಿಂದಲೇ ಸಿಎಂ ಆದ ಯಡಿಯೂರಪ್ಪ ಈಗ ಫುಲ್ ಖುಷ್.. 12 ಶಾಸಕರು ಗೆದ್ದು ಪಕ್ಷದ ಬಲ 117ಕ್ಕೆ ಏರಿದ್ದರಿಂದ ಇನ್ನು ಉಳಿದ ಮೂರೂವರೆ ವರ್ಷ ಸರ್ಕಾರ ಸೇಫ್. 

ಈ ನಡುವೆ ರಾಜಾಹುಲಿ, ಕೊಟ್ಟ ಮಾತಿನಂತೆ ಗೆದ್ದವರಿಗೆ ಮಂತ್ರಿಗಿರಿ ಫಿಕ್ಸ್ ಎಂದಿದ್ದಾರೆ. ರಾಣೆಬೆನ್ನೂರು ಶಾಸಕ ಅರುಣ್ ಪೂಜಾರ್ ಹೊರತುಪಡಿಸಿ, ಉಳಿದ 11 ಮಂದಿ ಮಂತ್ರಿಯಾಗೋದು ಖಚಿತವಾಗಿದೆ. 

Related Video